ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಗಳು ಡಿಸೆಂಬರ್ 10ರಿಂದ 14ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇಗುಲದ ದ್ವಾರದಿಂದ ಧರ್ಮಸ್ಥಳದವರೆಗೆ 8ನೇ ವರ್ಷದ ಪಾದಾಯಾತ್ರೆ ಡಿಸೆಂಬರ್ 10ರಂದು ನಡೆಯಿತು.ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್.ಹೆಚ್. ಮಂಜುನಾಥ್, ಉದ್ಯಮಿ ಮೋಹನ ಶೆಟ್ಟಿಗಾರ್, ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಎಂ.ಜಿ. ಶೆಟ್ಟಿ, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಉದ್ಯಮಿ ಮೋಹನ ಬೈಪಾಡಿತ್ತಾಯ, ಸಂಧ್ಯಾ ಟ್ರೇಡರ್ಸ್ನ ರಾಜೇಶ್ ಪೈ, ಬೆಳ್ತಂಗಡಿ ತಾಲೂಕು ಪಂಚಾಯತ್ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಉಪನ್ಯಾಸಕ ಡಾ| ಶ್ರೀನಾಥ್ ಎಂ. ಪಿ., ಯೋಜನಾ ನಿರ್ದೇಶಕ ವಸಂತ, ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಶಾರದಾ ರೈ, ಮಾಜಿ ಅಧ್ಯಕ್ಷರುಗಳಾದ ಪಿ. ಕೆ. ರಾಜು ಪೂಜಾರಿ ಕಾಶಿಪಟ್ಣ, ಡಿ. ಎ. ರೆಹಮಾನ್, ಎಂ. ತಿಮ್ಮಪ್ಪ ಗೌಡ ಬೆಳಾಲು, ಕಿಶೋರ್ ಹೆಗ್ಡೆ ಎರ್ಮೆತ್ತೋಡಿ, ವಲಯ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ನಾಮದೇವ ರಾವ್ ಮುಂಡಾಜೆ, ಮಂಜುನಾಥ ಕಾಮತ್ ಕೊಲ್ಲಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್ ಬಿ. ಕೆ., ಸಿಯೋನ್ ಆಶ್ರಮ ಟ್ರಸ್ಟ್ ನ ಯು. ಸಿ ಪೌಲೋಸ್ ಗಂಡಿಬಾಗಿಲು, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ತಾಲೂಕಿನ ಗಣ್ಯರು, ಧರ್ಮಸ್ಥಳದ ವರ್ತಕರು, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರುಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರೀಕರು, ಹೆಗ್ಗಡೆ ಅಭಿಮಾನಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಜನಾರ್ದನ ದೇವಸ್ಥಾನದ ಸಮೀಪ ಒಟ್ಟು ಸೇರಿ ಅಲ್ಲಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಹೊರಟರು.






