ಮತ‌ಎಣಿಕೆ ಕೇಂದ್ರದ ಬಳಿ‌ ರಾಷ್ಟ್ರದ್ರೋಹಿಗಳಿಂದ ಪಾಕಿಸ್ತಾನಪರ ಘೋಷಣೆ.ರಾಷ್ಟ್ರದ್ರೋಹಿಗಳ ಬಂಧನಕ್ಕೆ ಆಗ್ರಹ.

ಮತ‌ಎಣಿಕೆ ಕೇಂದ್ರದ ಬಳಿ‌ ರಾಷ್ಟ್ರದ್ರೋಹಿಗಳಿಂದ ಪಾಕಿಸ್ತಾನಪರ ಘೋಷಣೆ.ರಾಷ್ಟ್ರದ್ರೋಹಿಗಳ ಬಂಧನಕ್ಕೆ ಆಗ್ರಹ.
Facebook
Twitter
LinkedIn
WhatsApp

*ಬಿಗ್ ಬ್ರೇಕಿಂಗ್ ನ್ಯೂಸ್ *

ಬೆಳ್ತಂಗಡಿ: ಡಿಸೆಂಬರ್ 30ರಂದು ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತಗಳ ಎಣಿಕೆ ಕಾರ್ಯ ನಡೆಯುತ್ತಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎದುರುಗಡೆ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ತಮ್ಮ ಸಂಘಟನೆಯ ಧ್ವಜ ಹಿಡಿದು ಸಹಸ್ರಾರು ಮಂದಿ ಸಾರ್ವಜನಿಕರ ನಡುವೆಯೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ರಾಷ್ಟ್ರದ್ರೋಹದ ವಿಕೃತಿ ಮೆರೆದರು. ಸ್ಥಳದಲ್ಲಿದ್ದ ಕೇಸರಿ ಶಾಲು ಧರಿಸಿದ್ದ ಸಹಸ್ರಾರು ಸಂಖ್ಯೆಯ ಹಿಂದು ಕಾರ್ಯಕರ್ತರು ಈ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗದೇ ತಾಳ್ಮೆ ಪ್ರದರ್ಶಿಸಿದ್ದು ಸಂಭಾವ್ಯ ಗಲಭೆಯನ್ನು ತಪ್ಪಿಸಿದೆ.ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಂದೆರಡು ಗ್ರಾಮಗಳಲ್ಲಿ ಅದೂ ಮುಸ್ಲಿಂ ಮತದಾರರು ಪ್ರಾಬಲ್ಯ ಹೊಂದಿದ ವಾರ್ಡುಗಳಲ್ಲಿ ಕೇವಲ ಬೆರಳೆಣಿಕೆಯ ಸೀಟುಗಳನ್ನು ಗೆದ್ದಾಗಲೇ ನಮ್ಮ ಶತ್ರು ರಾಷ್ಟ್ರ ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಘೋಷಣೆ ಕೂಗುವ ಎಸ್‌ಡಿಪಿಐ ಕಾರ್ಯಕರ್ತರಿಗೆ ಭಾರತದ ಕಾನೂನಿನ ಹಾಗೂ ಮಣ್ಣಿನ ಗುಣದ ಸರಿಯಾದ ರುಚಿ ತೋರಿಸುವ ಮಹತ್ತರ ಜವಾಬ್ದಾರಿ ಪೊಲೀಸರದ್ದು. ಈ ಜವಾಬ್ದಾರಿಯನ್ನು ಪೊಲೀಸರು ಸಮರ್ಥವಾಗಿ ನಿರ್ವಹಿಸುವಂತಾಗಲಿ. ಅಂತೆಯೇ ಎಸ್‌ಡಿಪಿಐ ಕಾರ್ಯಕರ್ತರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ರಾಷ್ಟ್ರ ವಿರೋಧಿ ಘೋಷಣೆ ಕೂಗಿದಾಗ ಈ ದೇಶದ ಕಾನೂನಿನ‌ ಮೇಲೆ ವಿಶ್ವಾಸವಿರಿಸಿ ತಾಳ್ಮೆಯಿಂದ ಇದ್ದ ಕೇಸರಿ ಶಾಲು ಧರಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಹನೆ ದೌರ್ಬಲ್ಯ ಅಲ್ಲ ಎಂಬ ಸತ್ಯ ಸಂಗತಿಯನ್ನು ಎಸ್‌ಡಿಪಿಐ ಕಾರ್ಯಕರ್ತರು ಅರ್ಥೈಸಿಕೊಳ್ಳೋದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಒಳ್ಳೆಯದು.

Latest News

Related Posts