ಮೂಡುಬಿದಿರೆ : ಕರಿಂಜೆಯಲ್ಲಿ ರಾಶಿ ಹಾಕಲಾಗುತ್ತಿವ ಕಸ ಗಬ್ಬೆದ್ದು ನಾರುತ್ತಿರುವ ಹಿನ್ನೆಲೆಯಲ್ಲಿ ಕರಿಂಜೆ ಕಸ ವಿಲೇವಾರಿ ಘಟಕದ ಅವ್ಯವಸ್ಥೆ ಬಗ್ಗೆ ಈಗಾಗಲೇ ಹಲವಾರು ದಿನಗಳಿಂದ ದೂರುಗಳು ಬರುತಿದ್ದು, ಕೆಲ ದಿನಗಳ ಹಿಂದೆ ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮತ್ತು ಸಾರ್ವಜನಿಕವಾಗಿ ಮೂಡಬಿದಿರೆ ಪುರಸಭೆಗೆ ಸಾರ್ವಜನಿಕರು ಚೆನ್ನಾಗಿ ಮಂಗಳಾರತಿ ಎತ್ತಿದ್ದಾರೆ. ಜನವರಿ 31ರಂದು ಒಂದು ಜೆಸಿಬಿ ಮತ್ತು ಹಿಟಾಚಿ ಮೂಲಕ ಈ ಘನತ್ಯಾಜ್ಯ ಘಟಕದಲ್ಲಿ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಒಂದು ಪ್ರಯತ್ನ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್ , ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಜತೆ ಕಾರ್ಯದರ್ಶಿ ಸತೀಶ್ ಭಂಡಾರಿ, ಸ್ಥಳೀಯ ಮುಖಂಡರಾದ ಪ್ರಸಾದ್, ಸದಾನಂದ ಮತ್ತಿತರರು ಸ್ಥಳಕ್ಕೆ ತೆರಳಿ ಜೆಸಿಬಿ ಮತ್ತು ಹಿಟಾಚಿ ಮೂಲಕ ಆಗುತ್ತಿದ್ದ ಕೆಲಸಕ್ಕೆ ತಡೆಯೊಡ್ಡಿ ಅರ್ಧಂಬರ್ಧ ಕಸ ವಿಲೇವಾರಿಗೆ ಪ್ರಯತ್ನ ಪಟ್ಟ ಪುರಸಭಾ ಅಧಿಕಾರಿ ಮತ್ತು ಸಂಬಂಪಟ್ಟವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡು ವಾರ್ನಿಂಗ್ ಕೊಟ್ಟಿದ್ದಾರೆ. ಜೊತೆಗೆ ಈ ಅವ್ಯವಸ್ಥೆ ವಿರುದ್ಧ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ನಾಳೆಯಿಂದ ಕರಿಂಜೆಯಲ್ಲಿ ಕಸ ವಿಲೇವಾರಿ ಡೌಟ್ ಎನ್ನಲಾಗುತ್ತಿದೆ. ಇಷ್ಟಾದರೂ ಅದೇ ವಾರ್ಡನ್ನು ಪ್ರತಿನಿಧಿಸುವ ಪುರಸಭಾ ಸದಸ್ಯರು ಮಾತ್ರ ಪತ್ತೆಯೇ ಇರಲಿಲ್ಲ. ಕರಿಂಜೆ ಘನತ್ಯಾಜ್ಯ ಘಟಕದ ವಾರ್ಡ್ ಸದಸ್ಯರ ಜಾಣ ಮೌನ ಯಾಕೋ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಸ್ಥಳೀಯರು ಪಿಸುಪಿಸು ಮಾತನಾಡುತ್ತಿದ್ದಾರೆ.






