ಬೆಳಕು ಸೇವಾ ಪ್ರತಿಷ್ಠಾನದಿಂದ ನೆರವು

ಬೆಳಕು ಸೇವಾ ಪ್ರತಿಷ್ಠಾನದಿಂದ ನೆರವು
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳಕು ಸೇವಾ ಪ್ರತಿಷ್ಠಾನ ಬೆಳ್ತಂಗಡಿಯ ವತಿಯಿಂದ  ಕುವೆಟ್ಟು ಗ್ರಾಮದ ಅಮರ್ಜಾಲ್  ಕೋಡಿ ನಿವಾಸಿ ಸದಾಶಿವ ಸಪಲ್ಯ ದಂಪತಿಗಳ ಸುಪುತ್ರಿ ಅರ್ಪಿತಾಳ (17) ಹೃದಯ ಶಸ್ತ್ರಚಿಕಿತ್ಸೆಗಾಗಿ ಎಪ್ರಿಲ್ 21ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಭವನದಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಆರ್ಥಿಕ ನೆರವಿನ ಚೆಕ್ಕನ್ನು  ಹಸ್ತಾಂತರಿಸಲಾಯಿತು.      ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ  ಪಡುವೆಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್, ಶೆಟ್ಟಿ, ಸುವರ್ಣ ಸಾಂಸ್ಕೃತಿಕ  ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಆರ್.ಎಸ್.ಎಸ್. ಪ್ರಮುಖ್ ದಿನಕರ ಆದೇಲು ಗುರುವಾಯನಕೆರೆ, ತಾಲೂಕು ಪಂಚಾಯತ್ ಸದಸ್ಯ ಶಶಿಧರ ಕಲ್ಮಂಜ, ಉದ್ಯಮಿ ಪದ್ಮನಾಭ ಶೆಟ್ಟಿಗಾರ್, ದಾಮೋದರ ಕಾಮತ್, ನಾಗರಾಜ ಕಾಮತ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯೆ ಉಷಾಕಿರಣ್ ಕಾರಂತ, ಪ್ರಿಯಾ, ಬಾಲಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಜಿ. ಕೆ. ಮತ್ತಿತರರು ಉಪಸ್ಥಿತರಿದ್ದರು. 

Latest News

Related Posts