ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊರಂಬಾಡ್ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊರ್ವರು ಕಲ್ಲು ಗಣಿಗಾರಿಕೆಗೆ ಸಿದ್ದತೆಯನ್ನು ನಡೆಸುತ್ತಿದ್ದು, ಈ ಪರಿಸರದಲ್ಲಿ ಹಲವಾರು ಮನೆಗಳು, ತೋಟಗಳು ಇದ್ದು ಮುಂದೆ ಸಾಕಷ್ಟು ಅನಾಹುತವಾಗುವ ಸಂಭವವಿದೆ. ಆದ್ದರಿಂದ ಈ ಕಲ್ಲು ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಪರವಾನಿಗೆಯನ್ನು ನೀಡಬಾರದು ಎಂದು ಇಂದು ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತ್‌ಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಲೋಕಯ್ಯ ಪೂಜಾರಿ, ಉಪಾಧ್ಯಕ್ಷೆ ಶ್ವೇತಾ ಪರಮೇಶ್ವರ, ಸದಸ್ಯರಾದ ಜಗದೀಶ್ ಹೆಗ್ಡೆ , ಶೋಭಾ ನಾಯ್ಕ ಸ್ಥಳೀಯ ನಿವಾಸಿಗಳು ಕೋವಿಡ್ ನಿಯಮಗಳನ್ನು ಪಾಲಿಸಿ ಉಪಸ್ಥಿತರಿದ್ದರು.






