ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಕೊರೋನಾ ಸ್ಪೋಟ! ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್?

ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಕೊರೋನಾ ಸ್ಪೋಟ! ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್?
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಅದರಲ್ಲೂ ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ 15ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇಲ್ಲಿನ ಮಂದಿ ಕೊರೊನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಇದೆ. ತಾಲೂಕು ಆಡಳಿತವೂ ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ಈ ವಾರ್ಡ್‌ನ್ನು ಕಂಟೈನ್‌ಮೆಂಟ್ ಝೋನ್ ಆಗಿ ಇದುವರೆಗೆ ಘೋಷಿಸಲೂ ಇಲ್ಲ; ಈ ಪ್ರದೇಶವನ್ನು ಸೀಲ್‌ಡೌನ್ ಮಾಡಲೂ ಇಲ್ಲ. ಕೊರೊನಾ ಸೋಂಕು ಪಸರಿಸಲು ತಾಲೂಕು ಆಡಳಿತ ಇದಕ್ಕಿಂತ ಉತ್ತಮ ಕೊಡುಗೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಕಾನೂನು ಗೌರವಿಸುವ ನಾಗರಿಕರು; ಜಿಲ್ಲಾಡಳಿತವಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡು ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ, ಕಾನೂನು ಗೌರವಿಸುವ – ಕೋವಿಡ್ ನಿಯಮ ಪಾಲಿಸಿ ಮನೆಗಳಲ್ಲೇ ಇರುವ ನಾಗರಿಕರ ರಕ್ಷಣೆಗೆ ಮುಂದಾಗಲಿ.ಸುದೆಮುಗೇರು ವಾರ್ಡ್‌ನ ನಿವಾಸಿಗರಿಗೆ ದಿನನಿತ್ಯ ಬಳಕೆಯ ಅಗತ್ಯ ಸಾಮಾಗ್ರಿಗಳನ್ನು ತಾಲೂಕು ಆಡಳಿತ ಅವರವರ ಮನೆಗೆ ತಲುಪಿಸಬೇಕು. ಸುದೆಮುಗೇರು ನಿವಾಸಿಗಳೆಲ್ಲರನ್ನೂ ಕೊರೊನಾ ಟೆಸ್ಟ್‌ಗೆ ಒಳಪಡಿಸಬೇಕು. ಸುದೆಮುಗೇರು ಪ್ರದೇಶವನ್ನು ಸೀಲ್‌ಡೌನ್ ಮಾಡಿ, ಯಾರೂ ಮನೆಯಿಂದ ಹೊರಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ತಾಲೂಕು ಆಡಳಿತದ್ದು.

Latest News

Related Posts