ಬೆಳ್ತಂಗಡಿ: ಯಕ್ಷಭಾರತಿ (ರಿ) ಬೆಳ್ತಂಗಡಿ ಸಂಸ್ಥೆಯಿಂದ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ, ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮ ಕನ್ಯಾಡಿ ಯ ನೇರೋಳ್ ಪಲ್ಕೆ ಮಂಜುಗುರಿಯ ಕೃಷ್ಣ ಆಚಾರ್ಯ ಮತ್ತು ಸುಂದರಿ ದಂಪತಿಗಳಿಗೆ ಮೇ 11ರಂದು ಎರಡು ತಿಂಗಳ ಔಷಧಿಯನ್ನು ಅವರ ಮನೆಗೆ ತೆರಳಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಭಾರತಿಯ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ವಿಶ್ವಸ್ಥರಾದ ಸೂರ್ಯಾನಂದ ರಾವ್, ಸಂಚಾಲಕ ಮಹೇಶ್ ಕನ್ಯಾಡಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ವಸಂತ ನಾಯ್ಕ, ಸ್ಥಳೀಯರಾದ ಕಶ್ಯಪ್ ಮತ್ತು ಫಲಾನುಭವಿಯ ಮನೆಯವರು ಉಪಸ್ಥಿತರಿದ್ದರು.






