ಬೆಳ್ತಂಗಡಿ: ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಪ್ರಜ್ಞಾವಂತ ನಾಗರಿಕರು ಇನ್ನಷ್ಟು ಎಚ್ಚೆತ್ತುಕೊಳ್ಳುವುದರ ಜತೆ ಸವಾಲು, ತೊಂದರೆಗಳನ್ನು ಮೆಟ್ಟಿ ಮುಂದುವರಿಯಬೇಕು, ಗ್ರಾಮಗಳಲ್ಲಿ ಸಂಘ-ಸಂಸ್ಥೆಗಳು, ಉದ್ಯಮಿಗಳು, ಯುವಕರು ಸೇರಿ ಜನ ಜಾಗೃತಿ ಮೂಡಿಸುವುದರ ಜೊತೆಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಮುಂದಾಗಿ ಮಾದರಿಯಾಗಬೇಕು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಹೇಳಿದರು.ಅವರು ಮೇ 13ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಆಪ್ತರಕ್ಷಕ ಸೇವಾ ಯೋಜನೆಯ ಕುರಿತು ಮಾತನಾಡಿದರು.ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥ ಮೋಹನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಪ್ರಥಮ ಹಂತದಲ್ಲಿ ಉಜಿರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೊನಾ ಸಂತ್ರಸ್ತರ ನೆರವಿಗೆ ಯೋಜನೆ ರೂಪುಗೊಂಡಿದೆ. ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯವಿದ್ದವರಿಗೆ ತಕ್ಷಣ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯುವ ಧ್ಯೇಯದೊಂದಿಗೆ ಆಪ್ತರಕ್ಷಕ ಸೇವಾ ಯೋಜನೆ ಆರಂಭಿಸಲಾಗಿದೆ ಎಂದು ಹೇಳಿದರು.ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಓಡಿಯಪ್ಪ ಗೌಡ ಮತ್ತು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪವತಿ ಆರ್. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಎಚ್. ಪ್ರಕಾಶ್ ಶೆಟ್ಟಿ, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಅರ್ಚನಾ, ಬದುಕು ಕಟ್ಟೋಣ ಬನ್ನಿ ತಂಡದ ರಾಜೇಶ್ ಪೈ ಹಾಗೂ ಸದಸ್ಯರು, ರೋಟರಿ ಕ್ಲಬ್ ಕಾರ್ಯದರ್ಶಿ ಕೆ. ವಿ. ಶ್ರೀಧರ, ನಿಯೋಜಿತ ಕಾರ್ಯದರ್ಶಿ ಅಬೂಬಕ್ಕರ್, ಬೆಳ್ತಂಗಡಿ ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ, ಡಾl ಎಂ. ಎಂ. ದಯಾಕರ್, ನ್ಯಾಯವಾದಿ ಸುಬ್ರಮಣ್ಯ ಅಗರ್ತ, ಉದ್ಯಮಿ ರವಿ ಚಕ್ಕಿತ್ತಾಯ, ಡಿ. ಎಂ. ಗೌಡ, ಮತ್ತಿತರರು ಉಪಸ್ಥಿತರಿದ್ದರುರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ಣಾಯ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆಪ್ತರಕ್ಷಕ 24 /7 ತುರ್ತು ಸೇವೆಗೆ ಸಂಪರ್ಕ ಸಂಖ್ಯೆ 7760018100. ಒಟ್ಟು ಐದು ವಾಹನಗಳನ್ನು ಮೀಸಲಿಟ್ಟಿದ್ದು ಕೋವಿಡ್ ರೋಗಿಗಳಿಗೆ ಹಾಗೂ ದಿನಬಳಕೆ-ವಸ್ತು ಸಿಗದವರಿಗೆ ಸೇವೆ. ಅಗತ್ಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ವಾಹನ ಸೇವೆ. ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ಲಸಿಕೆ ಪಡೆಯುವ ಕುರಿತು ಅರಿವು ಉಂಟುಮಾಡುವುದು. ಕೋವಿಡ್ ರೋಗಿಗಳಿಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ, ಆಕ್ಸಿಜನ್ ಸ್ಯಾಚುರೇಶನ್, ಬಿಪಿ ಪರೀಕ್ಷೆ, ಎಕ್ಸ್‌ರೇ ಸ್ಕ್ರೀನಿಂಗ್ ಉಚಿತ. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಜಿರೆ ವ್ಯಾಪ್ತಿಯ 25ಆಶಾ ಕಾರ್ಯಕರ್ತರನ್ನು ಗೌರವಿಸಲಾಯಿತು.ಕೋವಿಡ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತಂಡದ ಮಂದಿಗೆ ಶರತ್ ಕೃಷ್ಣ ಪಡುವೆಟ್ಣಾಯ ಪಿ.ಪಿ.ಇ. ಕಿಟ್ ವಿತರಿಸಿದರು. ಪೊಲೀಸ್, ಆರೋಗ್ಯಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಪರವಾಗಿ ಠಾಣಾಧಿಕಾರಿ ಓಡಿಯಪ್ಪಗೌಡ, ಡಾl ಅರ್ಚನಾ, ಪುಷ್ಪಾವತಿ ಆರ್. ಶೆಟ್ಟಿ, ಪ್ರಕಾಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.






