ನಿರಾಶ್ರಿತರಿಗೆ ಹಾಗೂ ರೋಗಿಗಳಿಗೆ ಉಚಿತ ಊಟ ವಿತರಿಸುತ್ತಿರುವ ಅಲ್ ಅಮೀನ್ ಹೆಲ್ಪ್ ಲೈನ್ ತಂಡ

ನಿರಾಶ್ರಿತರಿಗೆ ಹಾಗೂ ರೋಗಿಗಳಿಗೆ ಉಚಿತ ಊಟ ವಿತರಿಸುತ್ತಿರುವ ಅಲ್ ಅಮೀನ್ ಹೆಲ್ಪ್ ಲೈನ್ ತಂಡ
Facebook
Twitter
LinkedIn
WhatsApp

ಮೂಡಬಿದಿರೆ:ಕೊರೋನ ಸಂದರ್ಭದಲ್ಲಿ ತಮ್ಮ ಜಾತಿ-ಧರ್ಮ-ಮತ ಬೇಧಗಳನ್ನು ಮರೆತು ಮಾನವಕುಲ ಒಂದೇ ಎಂದು ಭಾವಿಸಿ ಆಹಾರವಿಲ್ಲದೆ ಬದುಕು ದೂಡುತ್ತಿರುವ ನಿರ್ಗತಿಕರ ಹೊಟ್ಟೆ ತುಂಬಿಸುವ ಕೆಲಸವನ್ನು ಮೂಡಬಿದಿರೆಯ ಅಲ್ ಅಮೀನ್ ಹೆಲ್ಪ್ ಲೈನ್ ತಂಡದವರು ಕಳೆದ 19 ದಿನಗಳಿಂದ ದಿನನಿತ್ಯ ಮಾಡುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ. ಬಡವರ ಕಷ್ಟದ ಬಗ್ಗೆ ಅರಿತ ಕೆಲವರು ತಾವು ತಿನ್ನುವ ಅನ್ನವನ್ನು ಇತರರಿಗೂ ಹಂಚಿ ತಮ್ಮ ದೊಡ್ಡತನವನ್ನು ತೋರಿಸುತ್ತಾರೆ. ಮೂಡಬಿದಿರೆಯಲ್ಲಿ 2015 ರಲ್ಲಿ ಸ್ಥಾಪಿತವಾದ ಬಡ ಹೆಣ್ಣು ಮಕ್ಕಳ ಮದುವೆ ಹಾಗೂ ತೀರ ಬಡವರಿಗೆ ಚಿಕಿತ್ಸೆ ವೆಚ್ಚಗಳನ್ನು ಕೊಡುತ್ತಾ ಸಾಮಾಜಿಕ ಕೆಲಸ ಮಾಡುತ್ತಿದ್ದ ಅಲ್ ಅಮೀನ್ ಹೆಲ್ಪ್ ಲೈನ್ ತಂಡದ ಸದಸ್ಯರುಗಳು ಇಂದು ಈ ಸಂಕಷ್ಟದ ಕಾಲದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರು ಕಳೆದ 19ದಿನಗಳಿಂದ ದಿನನಿತ್ಯ ನಿರಾಶ್ರಿತರು ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ, ಪೌರ ಕಾರ್ಮಿಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ದೂರದ ಊರಿಂದ ಬರುವ ವಾಹನ ಚಾಲಕರಿಗೆ ಉಚಿತ ಆಹಾರ ವಿತರಿಸುತ್ತಿದ್ದಾರೆ. ಪ್ರತಿದಿನ ಸುಮಾರು 250 ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದರ ಜೊತೆಗೆ ಮಾಸ್ಕ್ ವಿತರಣೆಯನ್ನೂ ಮಾಡುತ್ತಿದ್ದಾರೆ. ಕೊರೋನ ಅಟ್ಟಹಾಸದಿಂದ ಜನಜೀವನ ಅತಂತ್ರಗೊಂಡಿದೆ. ಕುಡಿಯಲು ನೀರು ಆಹಾರವಿಲ್ಲದೇ ನಿರ್ಗತಿಕರ ಬದುಕು ಅಯೋಮಯವಾಗಿದೆ. ಇಂತಹ ಸಂಧರ್ಭದಲ್ಲಿ ಅಲ್ ಅಮೀನ್ ಹೆಲ್ಪ್ ಲೈನ್ ತಂಡದ ಸದಸ್ಯರು ಮಾಡುತ್ತಿರುವ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಎಂ. ಮೋಹನ್ ಆಳ್ವಾ ಅವರು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಮೂಡಬಿದಿರೆಯ ಆಸು ಪಾಸಿನಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮತ್ತು ನಿರಾಶ್ರಿತರಿಗೆ ಮಧ್ಯಾಹ್ನದ ಊಟದ ಅವಶ್ಯಕತೆ ಇದ್ದರೆ ಬೆಳಿಗ್ಗೆ 11 ಘಂಟೆಯ ಒಳಗಾಗಿ ಅಲ್ ಅಮೀನ್ ಹೆಲ್ಪ್ ಲೈನ್ ತಂಡದ ಈ ಕೆಳಗಿನ ಮುಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.ನಿಫಾಲ್ ಬೆದ್ರ 91480 30296ವಸೀರ್ ಪುತ್ತಿಗೆ 70197 61318ಅಬ್ದುಲ್ ಸಮದ್ ಅಲ್ ಝೈನ್ 97431 25241

Latest News

Related Posts