ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಇವರ ಹುಟ್ಟುಹಬ್ಬದ ದಿನವನ್ನು ಅನಾಥಾಶ್ರಮಕ್ಕೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.ಮೇ 30 ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಹುಟ್ಟುಹಬ್ಬದ ದಿನವಾಗಿದ್ದು ಆ ಪ್ರಯುಕ್ತ ಇಂದು ಯುವ ನಾಯಕ, ಎಪಿಎಂಸಿ ಸದಸ್ಯರು ಆಗಿರುವ ಚಂದ್ರಹಾಸ ಸಾಧು ಸನಿಲ್ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ಅಲಂಗಾರು ಮೌಂಟ್ ರೊಸಾರಿ ಆಶ್ರಮಕ್ಕೆ ಅಕ್ಕಿ ಹಾಗೂ ದಿನ ಉಪಯೋಗಿ ವಸ್ತುಗಳನ್ನು ನೀಡಿದರು , ಮೌಂಟ್ ರೊಸಾರಿ ಸಂಸ್ಥೆಗಳ ನಿರ್ದೇಶಕರಾದ ರೇ ಫಾ ಏವ್ಜಿನ್ ಪಿಂಟೊ , ಸಂಸ್ಥೆಯ ಮುಖ್ಯಸ್ತೆ ಸಿಸ್ಟರ್ ಪ್ರೆಸಿಲ್ಲಾ ಅವರು ಮಾಜಿ ಸಚಿವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು , ಈ ಸಂದರ್ಭದಲ್ಲಿ ಮೂಡಬಿದ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ , ಯುವ ಇಂಟಕ್ ಅಧ್ಯಕ್ಷರಾದ ಸುಚಿನ್ ಮಡಿವಾಳ , ಕಾಂಗ್ರೆಸ್ ಮುಖಂಡ ನ್ಯಾಯವಾದಿ ಇರ್ಷಾದ್ ಮೂಡಬಿದ್ರಿ ,ಯುವ ನಾಯಕ ಕ್ಲಾರಿಯೋ ಡಿ’ಸೋಜ ,ಕಾಂಗ್ರೆಸ್ ಮುಖಂಡರಾದ ಸಂತೋಷ್ ಶೆಟ್ಟಿ , ವಜೀರ್ , ಪ್ರವೀಣ್ ಮೆಂಡೋನ್ಸಾ ಶಿರ್ತಾಡಿ , ರವಿ ಭೋವಿ , ಹಾಗೂ ಇವತ್ತಿನ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿರುವ ಪ್ರಕಾಶ್ ದೇವಾಡಿಗ ಹಾಜರಿದ್ದರು. ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲು ಸೂಚಿಸಿದ್ದು, ಕೊರೊನ ಸಂದರ್ಭದಲ್ಲಿ ಬಡವರಿಗೆ ನೇರವಾಗಿ ಕಷ್ಟಕ್ಕೆ ಸ್ಪಂದನೆ ಮಾಡಲು ಸೂಚಿಸಿರುವ ಬಗ್ಗೆ ಚಂದ್ರಹಾಸ್ ಸನಿಲ್ ಈ ಸಂದರ್ಭದಲ್ಲಿ ತಿಳಿಸಿದರು.






