ಮೂಡುಬಿದಿರೆ : ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಮೇ 28ರಂದು ಸಂಜೆ 7-30ರ ಸುಮಾರಿಗೆ ಶರಣ್ ಪಂಪ್ ವೆಲ್ ಅವರು ಜಯಕುಮಾರ್ ಶೆಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಯನ್ನೂ ಒಡ್ಡಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರು ಸ್ವತ: ದೂರು ನೀಡಿದ್ದು ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಎ.ಪಿ.ಎಂ.ಸಿ. ಸದಸ್ಯ ಚಂದ್ರಹಾಸ ಸಾಧುಸನಿಲ್, ಹಿರಿಯ ಕಾಂಗ್ರೆಸಿಗ ಸುಂದರ ಸಿ. ಪೂಜಾರಿ, ಸುಚಿನ್ ಮಡಿವಾಳ ಉಪಸ್ಥಿತರಿದ್ದರು.ಕೆಲ ದಿನಗಳ ಹಿಂದೆ ಶರಣ್ ಪಂಪ್ ವೆಲ್ ಅವರು ತಮ್ಮ ಮೊಬೈಲ್ ವಾಟ್ಸಾಪ್ ಮೂಲಕ ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಲಾಡ್ಜ್ ಗೆ ಕರೆದಿದ್ದರೆಂದು ಹೇಳಲಾಗುತ್ತಿದೆ. ನಂತರ ಆ ಯುವತಿ ಈ ವಾಟ್ಸಾಪ್ ಮೆಸೇಜಿನ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಳು. ಇದೇ ಮೆಸೇಜನ್ನು ಜಯಕುಮಾರ್ ಶೆಟ್ಟಿಯವರು ಹಲವರಿಗೆ ಫಾರ್ವರ್ಡ್ ಮಾಡಿದ್ದಾರೆಂದು ಬಂದ ದೂರಿನನ್ವಯ ಸಿ.ಸಿ.ಬಿ. ಪೊಲೀಸರು ಜಯಕುಮಾರ್ ಶೆಟ್ಟಿ ಅವರನ್ನು ಕದ್ರಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ನಂತರ ಬಿಟ್ಟಿದ್ದರೆಂದು ವರದಿಯಾಗಿದೆ.






