ವಾರದಲ್ಲಿ ಮೂರು ದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿ;ಮೂಡುಬಿದಿರೆ ಜವಳಿ ವರ್ತಕರ ಸಂಘದಿಂದ ಮುಖ್ಯಮಂತ್ರಿಗೆ ಪತ್ರ

ವಾರದಲ್ಲಿ ಮೂರು ದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿ;ಮೂಡುಬಿದಿರೆ ಜವಳಿ ವರ್ತಕರ ಸಂಘದಿಂದ ಮುಖ್ಯಮಂತ್ರಿಗೆ ಪತ್ರ
Facebook
Twitter
LinkedIn
WhatsApp
ಮೂಡುಬಿದಿರೆ: ಈಗಿನಲಾಕ್ ಡೌನ್ ನಲ್ಲಿ ಜವಳಿ ವರ್ತಕರು ಚಿಂತಾಜನಕ ಪರಿಸ್ಥಿತಿಯನ್ನು ತಲುಪಿದ್ದು ಲಾಕ್ ಡೌನ್ ಆದೇಶದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಜವಳಿ ವರ್ತಕರಿಗೂ ವಾರದಲ್ಲಿ ಮೂರುದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸುವಂತೆ ಮೂಡುಬಿದಿರೆ ತಾಲೂಕು ಜವಳಿ ವರ್ತಕರ ಸಂಘವು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.ಈ ಬಗ್ಗೆ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಜವಳಿ ವರ್ತಕರ ಸಂಘದ ಪ್ರಮುಖರು ಈ ಬಾರಿ ಕೊರೋನಾ ಹಾವಳಿಯಿಂದ ಎಪ್ರಿಲ್ 24 ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಆಗಿದೆ.ದಿನಾ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಆದರೆ ಜನರು ಮಾತ್ರ 8 ಗಂಟೆಯಿಂದ 10 ಗಂಟೆಯವರೆಗೆ ಮೈ ಮೇಲೆ ಬಿದ್ದು ಖರೀದಿ ಮಾಡುತ್ತಾರೆ. ಕೆಲವು ಅಂಗಡಿಗಳಲ್ಲಿ, ಮಾರ್ಕೆಟ್ ನಲ್ಲಿ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಸಹಾ ಧರಿಸಿರುವುದಿಲ್ಲ. ಹೀಗಿರುವಾಗ ಕೊರೋನಾ ಹರಡದಿರುತ್ತದೆಯೇ.? ಆದರೆ ಬಟ್ಟೆ ಅಂಗಡಿಯವರು ಮಾತ್ರ ಮನೆಯಲ್ಲಿ ಕೂತರೆ ಕೊರೋನಾ ಹೇಗೆ ಕಡಿಮೆಯಾದೀತು.? ಅದಕ್ಕೆ ಜನರ ಅನಗತ್ಯ ಓಡಾಟ ನಿಯಂತ್ರಿಸಬೇಕಾಗುತ್ತದೆ.ಈ ಸಲ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮದ್ಯ ಇದೆ. ಇದು ಎಷ್ಟು ಅಗತ್ಯವಾದ ವಸ್ತು ಅಂತ ಪ್ರಜ್ಙಾವಂತರಿಗೆ ತಿಳಿದಿದೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡಿಸುವ ವಸ್ತು ಆಗಿದ್ದರೂ ಸರಕಾರ ಅದಕ್ಕೆ ಅವಕಾಶ ನೀಡಿದೆ.ರೆಡಿಮೇಡ್ ಉಡುಪುಗಳ ತಯಾರಿಗೆ ಅವಕಾಶ ಕೊಡಲಾಗಿದೆ. ಆದರೆ ಬಟ್ಟೆ ಅಂಗಡಿಗಳು ಮುಚ್ಚಿವೆ.ಪ್ರತಿ ದಿನವೂ ಗ್ರಾಹಕರು ಫೋನ್ ಮಾಡಿ ಅಗತ್ಯದ ಬಟ್ಟೆಗಳಿಗಾಗಿ ಒತ್ತಾಯಿಸುತ್ತಿದ್ದಾರೆ.ಸರಕಾರದ ನೀತಿಗೆ ವಿರುದ್ದವಾಗಿ ಹೋಗಲಾಗದೆ ಅವರಿಗೆ ಸೌಜನ್ಯದಿಂದ ನಿರಾಕರಿಸಿದಾಗಅವರು ವರ್ತಕರ ಮೇಲೆ ಕೋಪ ಗೊಂಡಿದ್ದಾರೆ. ಕೆಲವರು ಸಮಾರಂಭ ಮುಂದೂಡಲಾಗದೆ ಎಲ್ಲಿಂದಲೋ ಹೇಗೋ ವ್ಯವಸ್ಥೆ ಮಾಡಿಕೊಂಡು ಬಂದು ಜವಳಿ ವರ್ತಕರಿಗೆಕರೆಮಾಡಿ “ನೀವು ಕೊಡದಿದ್ದರೂ ನಾವು ತಗೊಂಡು ಬಂದಿದ್ದೇವೆ” ಅಂತ ಹೇಳುವಾಗ ಜವಳಿ ವರ್ತಕರಿಗೆ ಬದುಕಿಯೂ ಸತ್ತಂತೆ ಅನ್ನಿಸುತ್ತದೆ.ಹೀಗಾದರೆ ಜವಳಿ ವರ್ತಕರ ಭವಿಷ್ಯವೇನು ?.ಜವಳಿ ವರ್ತಕರ ವ್ಯವಹಾರದ ಸಮಸ್ಯೆಗಳು ಸಾವಿರ ಇವೆ. ಅದನ್ನು ಸರಕಾರದ ಬಳಿ ಹೇಳುವುದಕ್ಕೆ ಸಾದ್ಯವೇ ?ಆದರೂ ಹೀಗೆ ಲಾಕ್ ಡೌನ್ ನಿಂದಾಗಿ ವರ್ತಕರಿಗಾದ ಕಷ್ಟವನ್ನುಹೇಳದೆ ಇರುವುದು ಹೇಗೆ ?ಎಪ್ರಿಲ್ ತಿಂಗಳ GST ಕಟ್ಟಬೇಕು, ಬ್ಯಾಂಕ್ ಬಡ್ಡಿ ಮತ್ತು ವಿವಿಧ ಕಂತುಗಳನ್ನು ಪಾವತಿಸಬೇಕು, ಕೆಲಸದವರ ಸಂಬಳ ಕೊಡಬೇಕು, ಅಂಗಡಿ ಬಾಡಿಗೆ ಕೊಡಬೇಕು, ಮೆಸ್ಕಾಂ ಬಿಲ್ಲು ಕಟ್ಟಬೇಕು, ಮನೆಯ ಖರ್ಚು ಮತ್ತಿತರ ಖರ್ಚುಗಳನ್ನೂ ನಿಭಾಯಿಸಬೇಕು.ಇದನ್ನು ಈ ಸಲ ಸಂಬಾಳಿಸಲು ಜವಳಿ ವರ್ತಕರಿಂದ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ದೇಶದ ಅಭಿವೃದ್ದಿಗಾಗಿ ನಾವು ಸರಕಾರಕ್ಕೆ ಕೊಡುವ ತೆರಿಗೆ ಬಗ್ಗೆ ಜವಳಿ ವರ್ತಕರ ಚೌಕಾಶಿ ಇಲ್ಲ. ಆದರೆ ಸರಕಾರ ವರ್ತಕರ ಬಗ್ಗೆ ತಾಳಿರುವ ಅಸಡ್ಡೆಯ ಬಗ್ಗೆ ಜವಳಿ ವ್ಯಾಪಾರಿಗಳಿಗೆ ನೋವಿದೆ.ಎಲ್ಲಕ್ಕಿಂತಲೂ ಮಿಗಿಲಾಗಿ ಕಳೆದ ವರ್ಷ ಜುಲೈನಲ್ಲಿ ಕೊರೋನಾ ಕೇಸುಗಳು ಜಾಸ್ತಿಯಾದಾಗ ಜು.6 ರಿಂದ15 ದಿನಗಳವರೆಗೆ ಬೆಳಿಗ್ಗೆ ಅರ್ಧ ದಿನ ಮಾತ್ರ ವ್ಯವಹಾರ ಮಾಡಿ ಮೂಡುಬಿದಿರೆ ಜವಳಿ ವರ್ತಕರು ರಾಜ್ಯದಲ್ಲೇ ಮಾದರಿಯಾಗಿದ್ದಾರೆ. ಒಂದು ವೇಳೆ ವ್ಯಾಪಾರವೇ ಮುಖ್ಯವಾಗಿದ್ದರೆ ಸರಕಾರ ಹೇಳುವ ಮೊದಲೇ ರಜೆ ಮಾಡುವ ಅಗತ್ಯವಿರಲಿಲ್ಲ.ಈಗಿನ ತುರ್ತು ಏನೆಂದರೆ ಮೃತರಿಗೆ ಬಿಳಿ ಬಟ್ಟೆಬೇಕು, ಕ್ರೈಸ್ತರಲ್ಲಿ ಮೃತ ವ್ಯಕ್ತಿಗೆ ಸೂಟ್ಹಾಕುವ ಕ್ರಮ ಉಂಟು. ತಮ್ಮ ಪ್ರೀತಿ ಪಾತ್ರರಿಗೆ ಕ್ರಮಬದ್ದವಾಗಿ ವಿದಾಯ ಹೇಳಬೇಕೆಂದು ಆಶಿಸುತ್ತಾರೆ. ಸೀಮಂತಕ್ಕೆ ಹಸಿರು ಜರಿ ಸೀರೆ ಬೇಕು. ಸೀಮಂತ ಮುಂದೂಡಿ ಹೆರಿಗೆಯ ನಂತರ ಮಾಡಲಿಕ್ಕೆ ಸಾಧ್ಯವೇ ?, ಅಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಮೃದು ಬಿಳಿ ಬಟ್ಟೆ, ಪುಟ್ಟ ಅಂಗಿ ಬೇಕು.ಆಸ್ಪತ್ರೆಗಳಿಗೆ ಬೆಡ್ ಶೀಟ್ ಬೇಕು, ಮಳೆಗಾಲ ಬಂದಾಯಿತು. ರೈನ್ ಕೋಟ್ ಮತ್ತು ಕೊಡೆಗಳನ್ನು ಇನ್ಯಾವಾಗ ಮಾರುವುದು.? ಈ ಮಳೆಗಾಲದಲ್ಲಿ ಮಾಸ್ಕ್ ಹಾಗೂ ಒಳ ಉಡುಪುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕು. ಇಲ್ಲದಿದ್ದರೆ ಫಂಗಸ್ ಸಮಸ್ಯೆಗಳು ಬರುತ್ತವೆ. ಈಗಾಗಲೇ ಬಿಳಿ ಮತ್ತು ಕಪ್ಪು ಫಂಗಸ್ ರೋಗ ಹರಡಲಾರಂಭವಾಗಿದೆ.ಈ ಸಲದ ಸೀಸನ್ ಗಾಗಿ ವಿಪರೀತ ಖರೀದಿ ಬಟ್ಟೆ ವ್ಯಾಪಾರಿಗಳು ವಿಪರೀತ ಖರೀದಿ ಮಾಡಿದ್ದಾರೆ. ಅದರ ಮೊತ್ತ ಪಾವತಿಯಾಗಬೇಕು. ನಮ್ಮ ಕರಾವಳಿ ಹವೆಯಲ್ಲಿ ಕೆಲವು ನಿರ್ಧಿಷ್ಟ ಬಣ್ಣದ ಸಿಲ್ಕ್ ಸೀರೆಗಳು ಹಾಳಾಗುತ್ತವೆ. ಈಗ ಖರೀದಿ ಮಾಡಿದ ರೆಡಿಮೇಡ್ ಐಟಂಗಳು ಫೇಶನ್ ಔಟಾಗಿ ಮುಂದಿನ ಸಲ ಮಾರುವುದು ಕಷ್ಟ. ಜವಳಿ ಮಳಿಗೆಗಳಲ್ಲಿ ಮಾರಾಟವಾಗಬೇಕಿರುವ ಮಗುವಿನ ಅಂಗಿ ಮತ್ತು ಲೇಡೀಸ್ ನೈಟಿ ಮತ್ತು ಒಳ ಉಡುಪುಗಳನ್ನು ಆಸ್ಪತ್ರೆಯ ಪಕ್ಕದ ಮೆಡಿಕಲ್ ನವರು ಮಾರುತ್ತಿರುವುದು ಬಟ್ಟೆ ಅಂಗಡಿಯವರಿಗೆ ತೊಂದರೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಜವಳಿ ಉದ್ಯಮವು GST ಪಾವತಿಯಲ್ಲಿ ಅತಿ ಮುಖ್ಯ ಸ್ಥಾನದಲ್ಲಿದ್ದು ಅತಿ ಹೆಚ್ಚು ಕಾರ್ಮಿಕರಿಗೆ ಕೆಲಸ ಕೊಟ್ಟಿದ್ದರೂ ಸರಕಾರದಿಂದ ನಿರ್ಲಕ್ಷ್ಯ ಕ್ಕೊಳಪಟ್ಟಿದೆ.ಜನರು ಪ್ರತಿ ದಿನ ತರಕಾರಿ ಜೀನಸು ಸಾಮಾನು ಖರೀದಿಸುವ ಅನಿವಾರ್ಯತೆ ಏನಿದೆ.?ಜವಳಿ ವರ್ತಕರ ಕೋರಿಕೆ ಎಂದರೆ ದಿನ ಬಿಟ್ಟು ದಿನ ಹೀಗೆ ವಾರದ ನಾಲ್ಕು ದಿನ ಅಗತ್ಯ ವಸ್ತುಗಳಿಗೆ ಅನುಮತಿ ಕೊಟ್ಟು ಉಳಿದ ನಡುವಿನ ಮೂರು ದಿನಗಳಲ್ಲಿ ಬಟ್ಟೆ ಮತ್ತು ಇತರ ಅಂಗಡಿಗಳಿಗೆ ಅವಕಾಶ ಕೊಡಿ.ನೀವು ತಕ್ಷಣವೇ ಸ್ಪಂದಿಸದಿದ್ದರೆಜವಳಿ ವ್ಯಾರಿಗಳು ಬೀದಿಗೆ ಬೀಳುತ್ತಾರೆ. ಜೊತೆಗೆ ಜವಳಿ ಅಂಗಡಿಗಳನ್ನು ನಂಬಿರುವ ಕೆಲಸದವರನ್ನೂ ಬೀದಿಗೆ ತಳ್ಳಿದಂತಾದೀತು.ತಕ್ಷಣವೇ ಬಟ್ಟೆ ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ಸಿಗದಿದ್ದರೆ ಬಿರುಸಿನ ಮಳೆ ಆರಂಭವಾದರೆಮತ್ತೆ ಸ್ವಲ್ಪವೂ ವ್ಯಾಪಾರವಿಲ್ಲದೆ ನೆಲ ಕಚ್ಚುತ್ತಾರೆ.ಇಡೀ ರಾಜ್ಯದಲ್ಲಿ ಎಲ್ಲರಿಗೂ ಪ್ಯಾಕೇಜ್ ಕೊಟ್ಟಿದ್ದೀರಿ. ಆದರೆ ಜವಳಿ ವ್ಯಾಪಾರಿಗಳ ಬಗ್ಗೆ ಯಾಕೆ ಈ ಅಸಡ್ಡೆ.?ಹಾಗಾಗಿ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ವಾರದಲ್ಲಿ ಮೂರು ದಿನ ಕನಿಷ್ಟ ಆರು ತಾಸಿನಂತೆ ವ್ಯವಹಾರಕ್ಕೆ ಅನುಮತಿ ಕೊಡಿರಿ ಎಂದು ಜವಳಿ ವರ್ತಕರ ಸಂಘವು ತಮ್ಮ ಮನವಿಯಲ್ಲಿ ಮುಖ್ಯಮಂತ್ರಯವರಲ್ಲಿ ವಿನಂತಿಸಿಕೊಂಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದಿರೆ ಜವಳಿ ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಪೈ, ಗೌರವಾಧ್ಯಕ್ಷ ಪ್ರಭಾಚಂದ್ರ ಜೈನ್, ಪ್ರಧಾನ ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ರಾವ್, ಪದಾಧಿಕಾರಿಗಳಾದ ಅನ್ವರ್ ಸಾದಿಕ್, ಪೂರ್ಣಚಂದ್ರ ಜೈನ್, ಗೋವಿಂದ ಪ್ರಜಾಪತ್ ಮತ್ತಿತರರು ಉಪಸ್ಥಿತರಿದ್ದರು.

Latest News

Related Posts