ಎಂ.ಆರ್.ಪಿ.ಎಲ್‌ನ ಉದ್ಯೋಗ ನೀತಿ ಖಂಡಿಸಿ ಮನೆಮನೆ ಹೋರಾಟ

ಎಂ.ಆರ್.ಪಿ.ಎಲ್‌ನ ಉದ್ಯೋಗ ನೀತಿ ಖಂಡಿಸಿ ಮನೆಮನೆ ಹೋರಾಟ
Facebook
Twitter
LinkedIn
WhatsApp

ಬೆಳ್ತಂಗಡಿ: ಎಂ.ಆರ್.ಪಿ.ಎಲ್ ಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸುವ ಸಂದರ್ಭ ಇಲ್ಲಿಯ ಜನರ ಒಡೆತನದ ಭೂಸ್ವಾದೀನ ಮಾಡುವ ಸಂದರ್ಭ, ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಉದ್ಯೋಗ ನೀಡುವಾಗ ಸ್ಥಳಿಯರಿಗೇ ಆದ್ಯತೆ ನೀಡುವ ಭರವಸೆ ಸಂಸ್ಥೆ ನೀಡಿತ್ತು. ಆದರೆ ಇಂದು ಎಂ.ಆರ್.ಪಿ.ಎಲ್. ನವರು ಮೆರಿಟ್ ಇಲ್ಲದೆ, ನಮ್ಮ ಜಿಲ್ಲೆಗೆ ಆದ್ಯತೆಯನ್ನೂ ನೀಡದೇ ಸರಕಾರದ ಕಾನೂನು ಉಲ್ಲಂಘಿಸಿ ಉದ್ಯೊಗ ನೀಡುತ್ತಿರುವುದು ಖಂಡನೀಯ. ಆದ್ದರಿಂದ ಎಂ.ಆರ್.ಪಿ.ಎಲ್‌ನ ಉದ್ಯೋಗದಲ್ಲಿ ಸ್ಥಳಿಯರಿಗೆ ಆದ್ಯತೆ ನೀಡ ಬೇಕು ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ರಾಜ್ಯದ್ಯಕ್ಷರಾದ ಬಿ. ಎಂ. ಭಟ್ ಹೇಳಿದರು. ಸ್ಥಳೀಯರಿಗೇ ಉದ್ಯೋಗ ಒದಗಿಸಬೇಕೆಂದು ಒತ್ತಾಯಿಸಿ, ಎಂ.ಆರ್.ಪಿ.ಎಲ್.ನ ಸರ್ವಾಧಿಕಾರಿ ದೋರಣೆ ಖಂಡಿಸಿ ಜೂನ್ 5ರಂದು ಸಮಾನ ಮನಸ್ಕ ಎಲ್ಲಾ ಸಂಘಟನೆಗಳು ಮನೆಮನೆ ಹೋರಾಟ ನಡೆಸಲು ತೀರ್ಮಾನಿಸಿದಂತೆ ನಮ್ಮ ಸಂಘಟನೆಯೂ ಬೆಂಬಲ ನೀಡಿ ಹೋರಾಟ ನಡೆಸಿತು ಎಂದವರು ಹೇಳಿದರು.

Latest News

Related Posts