ಮೂಡುಬಿದಿರೆ: ಸೌಹಾರ್ಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆಂಬುಲೆನ್ಸ್ ಕೊಡುಗೆಯನ್ನು ಸ್ಕೌಟ್ ಗೈಡ್ಸ್ ಕನ್ನಡ ಸಂಘದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಸಿ.ಎಚ್. ಅಬ್ದುಲ್ ಗಫೂರ್, ಹಸ್ದುಲ್ಲಾ ಇಸ್ಮಾಯಿಲ್, ಅಬುಲ್ ಾಲಾ ಪುತ್ತಿಗೆ, ಮಕ್ಬುಲ್ ಹುಸೇನ್ ಅವರು ಶಾಸಕ ಉಮನಾಥ್ ಎ. ಕೋಟ್ಯಾನ್ ಅವರಿಗೆ ಹಸ್ತಾಂತರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಚೌಟರ ಅರಮನೆಯ ಕುಲದೀಪ ಎಂ., ಡಾ.ಮೋಹನ್ ಆಳ್ವ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮೂಡಾ ಅಧ್ಯಕ್ಷ ಮೇಘನಾಥ್ ಶೆಟ್ಟಿ, ಡಾ। ಹರೀಶ್ ನಾಯಕ್, ಪುರಸಭಾ ಸದಸ್ಯ ಕೊರಗಪ್ಪ, ತಹಶೀಲ್ದಾರ್ ಪುಟ್ಟರಾಜು, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಇಂದು ಹಾಗು ಟ್ರಸ್ಟ್ ನ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.






