ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಂಘಟನೆ ನವಭಾರತ್ ಗೆಳೆಯರ ಬಳಗ(ರಿ) ಕಲ್ಲಾಜೆ-ಇಂದಬೆಟ್ಟು ವತಿಯಿಂದ ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಸೇವಾ ಕಾರ್ಯ ನಡೆಸುತ್ತಿರುವ ಬೆಳ್ತಂಗಡಿ ತಾಲೂಕಿನ ಗೋಶಾಲೆಗಳಾದ ನಂದ ಗೋಕುಲ ಗೋಶಾಲೆ ಕಳೆಂಜ (2 ಲೋಡ್ ಪಿಕಪ್) ಹಾಗೂ ಕಾಮಧೇನು ಗೊಶಾಲೆ ಸೌತಡ್ಕ ಕ್ಷೇತ್ರಕ್ಕೆ(1ಲೋಡ್ ಪಿಕಪ್) ಹಸಿ ಹುಲ್ಲನ್ನು ನೀಡಲಾಯಿತು. ಮತ್ಸ್ಯ ಕ್ಷೇತ್ರ ಶಿಶಿಲದ ದೇವರ ಮೀನುಗಳಿಗೆ ಆಹಾರವನ್ನು ನೀಡುವ ಮೂಲಕ ಸಂಘದ ಸದಸ್ಯರಿಂದ ಸೇವಾ ಕಾರ್ಯ ಮುಂದುವರಿಯಿತು. ಈ ಸಂದರ್ಭದಲ್ಲಿ ನವಭಾರತ್ ಸಂಘಟನೆಯ ಗೌರವ ಅಧ್ಯಕ್ಷ ಅರುಣ್ ಕುಮಾರ್, ಅಧ್ಯಕ್ಷ ಶ್ರೀಕಾಂತ್ ಎಸ್. ಇಂದಬೆಟ್ಟು, ಕಾರ್ಯದರ್ಶಿ ನವೀನ್ ನಡುಗುಡ್ಡೆ, ವಿ.ಎಚ್.ಪಿ. ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಉಪಾಧ್ಯಕ್ಷರಾದ ಶ್ರೀಧರ್ ಗುಡಿಗಾರ್ ನಾವೂರು ಹಾಗೂ ನವಭಾರತ್ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.






