ಲಾಕ್‌ಡೌನ್ ಸಂದರ್ಭ ಹಸಿದವರಿಗೆ ನೆರವಿನ ಹಸ್ತ ಚಾಚಿದ ಉಮೇಶ್ ಪ್ರಭು

ಲಾಕ್‌ಡೌನ್ ಸಂದರ್ಭ ಹಸಿದವರಿಗೆ ನೆರವಿನ ಹಸ್ತ ಚಾಚಿದ ಉಮೇಶ್ ಪ್ರಭು
Facebook
Twitter
LinkedIn
WhatsApp

ಬೆಳ್ತಂಗಡಿ: ಧರ್ಮಸ್ಥಳದ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ಉಮೇಶ್ ಪ್ರಭು ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಮನೆಯವರ ಜೊತೆಗೆ ಸೇರಿ‌ ಕೋವಿಡ್ ವಾರಿಯರ್ಸ್‌ಗಳಿಗೆ ಮಾತ್ರವಲ್ಲ; ನಿರ್ಗತಿಯರಿಗೆ‌ ಹಾಗೂ ನಿರಾಶ್ರಿತರಿಗೆ ಪ್ರತಿನಿತ್ಯ ಉಚಿತ ಆಹಾರ ಒದಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಕಡೆಗಳಲ್ಲಿ ಹೋಟೆಲ್ ಗಳು ಇಲ್ಲದೆ ಜನ ಪರದಾಡುವಂತದ್ದನ್ನು ಮನಗಂಡು ತನ್ನ ಮನೆಯವರ ಹಾಗೂ ಗೆಳೆಯರ ಜೊತೆಗೆ ಸೇರಿ ಅಡುಗೆ ತಯಾರಿಸಿ ತನ್ನ ಸ್ವಂತ ಪಿಕ್ಆಫ್ ವಾಹನದಲ್ಲಿ ಧರ್ಮಸ್ಥಳದಿಂದ ಉಜಿರೆ ತನಕ ನಿರ್ಗತಿಯರಿಗೆ, ನಿರಾಶ್ರಿತರಿಗೆ, ಅರಕ್ಷಕರಿಗೆ ಉಚಿತವಾಗಿ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಉಮೇಶ್ ಪ್ರಭು ಯುನೈಟೆಡ್ ಫ್ರೆಂಡ್ಸ್ ಎಂಬ ಸಂಘಟನೆ ಸ್ಥಾಪಿಸಿ ಅದರ ಮೂಲಕ ಧರ್ಮಸ್ಥಳ ಗ್ರಾಮ ಸೇರಿದಂತೆ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತವಾಗಿ 550 ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರದಿದ್ದಾರೆ. ಇವರ ಸೇವೆ ಇತರರಿಗೆ ಮಾದರಿಯಾಗಲಿ ಎಂಬ ಹಾರೈಕೆ ನಮ್ಮದು.

Latest News

Related Posts