ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾಗಿರುವ ರಕ್ಷಿತ್ ಶಿವರಾಂರವರ ನೇತೃತ್ವದ ಬ್ರಹ್ಮಶ್ರೀ ಎಜುಕೇಶನ್ & ಸೋಶಿಯಲ್ ಟ್ರಸ್ಟ್ ನ (BEST) ಆಶ್ರಯದಲ್ಲಿ ಬೆಳ್ತಂಗಡಿ ತಾಲ್ಲೂಕು ಯುವ ಕಾಂಗ್ರೆಸ್‌ನ ಸಹಯೋಗದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆ ಅರ್ಹ ಕುಟುಂಬಗಳಿಗೆ ಆಹಾರ ಪರಿಕರ ಸಾಮಗ್ರಿಗಳ ನೆರವನ್ನು ನಾಲ್ಕಾರು ದಿನಗಳಿಂದ ನೀಡುತ್ತಿದ್ದು, ಜೂನ್ 14ರಂದು ಬೆಳ್ತಂಗಡಿ ತಾಲೂಕಿನ ಧರ್ಮ ಪ್ರಾಂತ್ಯದ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ವಠಾರದ ಬಡ ಕುಟುಂಬಗಳಿಗೆ, ಬಡಗಕಾರಂದೂರು, ಬಳೆಂಜ, ಅಳದಂಗಡಿ ಹಾಗೂ ಸುಲ್ಕೇರಿ ಗ್ರಾಮಗಳಲ್ಲಿಯ ನೂರಾರು ಕುಟುಂಬಗಳಿಗೆ ನೀಡಲಾಯಿತು.ಈಗಾಗಲೇ ಬೆಂಗ್ಳೂರು ನಗರದ ನಾನಾ ಭಾಗದಲ್ಲಿ ಬೆಸ್ಟ್ ಫೌಂಡೇಶನ್ ನಿಂದ ಅರ್ಹ ಫಲಾನುಭವಿಗಳಿಗೆ ನೆರವು ನೀಡಿದ್ದು, ಇಂದಿನ ಕಾರ್ಯಕ್ರಮದಲ್ಲಿ ರಕ್ಷಿತ್ ಶಿವರಾಂ, ಎಐಸಿಸಿ ವಕ್ತಾರೆ ಲಾವಣ್ಯ ಬಳ್ಳಾಲ್, ರಾಜ್ಯ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಕುಮಾರ್, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಪಂಚಾಯತ್ ಸದಸ್ಯ ರವೀಂದ್ರ ಅಮೀನ್, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಅಧ್ಯಕ್ಷ ಬಿ. ಕೆ. ವಸಂತ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಸದಸ್ಯ ಪ್ರಭಾಕರ್, ಇಂಟಕ್ ಅಧ್ಯಕ್ಷ ನವೀನ್ ಗೌಡ. ಸೇವಾದಳ ಸಾಮಾಜಿಕ ಜಾಲತಾಣದ ಗಣೇಶ್ ಕಣಿಯೂರು, ಅಜಯ್ ಅಜಯ್ ಮಟ್ಲ, ಪ್ರಜ್ವಲ್ ಜೈನ್, ಅಳದಂಗಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಜೀವ ಪೂಜಾರಿ ಕೊಡಂಗೆ, ಸತೀಶ್ ಮಿತ್ತಮಾರು, ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರಿ. ಸಂದೀಪ್ ಎಸ್ ನೀರಳ್ಕೆ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






