ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕುವೆಟ್ಟು ಗ್ರಾಮ ಪಂಚಾಯತ್ ಎದುರು ಕಾಂಗ್ರೆಸ್ ಪ್ರತಿಭಟನೆ

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕುವೆಟ್ಟು ಗ್ರಾಮ ಪಂಚಾಯತ್ ಎದುರು ಕಾಂಗ್ರೆಸ್ ಪ್ರತಿಭಟನೆ
Facebook
Twitter
LinkedIn
WhatsApp

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕುವೆಟ್ಟು ಹಾಗು ಓಡಿಲ್ನಾಳ ಗ್ರಾಮ ಸಮಿತಿಯ ನೇತ್ರತ್ವದಲ್ಲಿ ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಸಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಜೂನ್ 14ರಂದು ಕುವೆಟ್ಟು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮಾತನಾಡಿ, ಇತ್ತೀಚಿನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಲೀಟರ್ ಪೆಟ್ರೋಲ್‌ಗೆ 35 ರೂಪಾಯಿ ಆಗಿದ್ದರೂ ಕೂಡ ತೆರಿಗೆ ರೂಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು 65 ರೂಪಾಯಿ ಸೇರಿಸಿ 100 ರೂಪಾಯಿಗೆ ಮಾರಾಟ ಮಾಡುತ್ತಿರುವುದು ಹಗಲು ದರೋಡೆ ಆಗಿದೆ. ಈ ಕೊರೋನದ ಸಂಕಷ್ಟದ ಸಮಯದಲ್ಲಿ ಜನರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರೂ ಯಾವುದೇ ರೀತಿಯ ಕನಿಕರವನ್ನು ತೋರದೆ ಪೆಟ್ರೋಲ್, ಗ್ಯಾಸ್ ಸಹಿತ ದಿನಬಳಕೆಯ ಸಾಮಾಗ್ರಿಗಳ ಬೆಲೆ ಏರಿಸಿರುವ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಬಿಜೆಪಿ ಸರಕಾರದ ಧೋರಣೆ ಜನವಿರೋಧಿ ಎಂದರು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ. ಗೌಡ, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಶೇಕರ ಕುಕ್ಕೆಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗೋಪಿನಾಥ್ ನಾಯಕ್, ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಎಸ್. ಸಿ. ಘಟಕದ ಅಧ್ಯಕ್ಷ ವಸಂತ ಬಿ. ಕೆ., ಬೆಳ್ತಂಗಡಿ ಎ.ಪಿ.ಎಂ.ಸಿ‌ ಮಾಜಿ ಅಧ್ಯಕ್ಷ ಭರತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಪ್ರಭಾಕರ ಎಸ್, ಬೆಳ್ತಂಗಡಿ ಯುವ ಇಂಟಕ್ ಅಧ್ಯಕ್ಷರಾದ ಅನೂಪ್ ಎಂ. ಬಂಗೇರ, ರಫೀಕ್ ಗುರುವಾಯನಕೆರೆ, ಮಹಮ್ಮದ್ ರಾಝಿಯುದ್ದಿನ್ ಸಪರಬೈಲು, ಬದ್ರುದ್ದೀನ್ ಮದ್ದಡ್ಕ, ಸಿರಾಜ್ ಚಿಲಿಂಬಿ, ಕುವೆಟ್ಟು ಪಂಚಾಯತ್ ಮಾಜಿ ಸದಸ್ಯರಾದ ರಿಯಾಜ್ ಅಹಮದ್, ಸಿರಾಜ್ ಪಾಡ್ಯರ್ ಹಾಗು ಕಾರ್ಯಕರ್ತರು ಭಾಗವಹಿಸಿದ್ದರು. ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷರಾದ ಕೆ. ಸಲೀಂ ಸ್ವಾಗತಿಸಿ, ಉಮರಬ್ಬ ಮದ್ದಡ್ಕ ಧನ್ಯವಾದ ಸಲ್ಲಿಸಿದರು.

Latest News

Related Posts