ಕುಸಿಯುವ ಭೀತಿಯಲ್ಲಿದ್ದ ಮನೆಗೆ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದಿಂದ ಮರುಜೀವ

ಕುಸಿಯುವ ಭೀತಿಯಲ್ಲಿದ್ದ ಮನೆಗೆ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದಿಂದ ಮರುಜೀವ
Facebook
Twitter
LinkedIn
WhatsApp

ಮೂಡುಬಿದಿರೆ: ಮೂಡಬಿದಿರೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತಿಗೆ ಗ್ರಾಮದ ಪಳಕಳ ಎಂಬಲ್ಲಿ ಒಂದು ಬಡ ಕುಟುಂಬದ ಮನೆಯ ಮಾಡು ಕುಸಿಯುವ ಭೀತಿ ಎದುರಾಗಿತ್ತು. ಮಾಡಿನ ಹಂಚುಗಳು ಸಂಪೂರ್ಣ ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯ ಪಂಚಾಯತ್ ಸದಸ್ಯ ಶರೀಫ್ ಮಿಲನ್ ರವರು ಮೂಡಬಿದಿರೆ ಎಸ್ ಕೆ ಎಸ್ ಎಸ್ ಎಫ್ ವಲಯದ ವಿಖಾಯ ತಂಡದ ನೆರವನ್ನು ಕೋರಿದರು. ತಕ್ಷಣವೇ ಅದಕ್ಕೆ ಸ್ಪಂದಿಸಿದ ಎಸ್ ಕೆ ಎಸ್ ಎಸ್ ಎಫ್ ಮೂಡುಬಿದಿರೆ ವಲಯದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಇಸ್ಹಾಕ್ ಹಾಜಿ ತೋಡಾರ್ ಇವರ ಸೂಚನೆಯ ಮೇರೆಗೆ ಘಟನಾ ಸ್ಥಳಕ್ಕೆ ಧಾವಿಸಿ ಕುಸಿಯುವ ಭೀತಿಯಲ್ಲಿದ್ದ ಛಾವಣಿಯನ್ನು ಪುನರ್ ನಿರ್ಮಿಸಿ ಕುಟುಂಬಕ್ಕೆ ನೆರವಾದರು.ಮಾಡಿನ ದುರಸ್ತಿಗಾಗಿ ಬೇಕಾದಂತ ಪಕ್ಕಾಸು, ಹೆಂಚು ಹಾಗೂ ಇತರ ಸಾಮಾಗ್ರಿಗಳನ್ನು ವಲಯದ ವಿಖಾಯ ಚಯರ್ಮೆನ್ ಹೈದರ್ ರವರ ನೇತೃತ್ವದಲ್ಲಿ ತರಲಾಯಿತು. ಅಲ್ಲದೇ ಆ ಕೆಲಸಕ್ಕೆ ಅಗತ್ಯವಿದ್ದ ನುರಿತ ಕಾರ್ಪೆಂಟರ್ ಗಳನ್ನು ಕರೆಸಿ ತಾವೂ ಸ್ವಯಂ ಸ್ಪೂರ್ತಿಯಿಂದ ಈ ಕೆಲಸದಲ್ಲಿ ಪಾಲ್ಗೊಂಡು ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಈ ಸಂಧರ್ಭದಲ್ಲಿ ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಹನೀಫ್ ಪುತ್ತಿಗೆ (ವಿಶ್ವಾಸ್), ವಲಯಾಧ್ಯಕ್ಷ ಅಶ್ರಫ್ ಮರೋಡಿ, ವಲಯ ಕಾರ್ಯದರ್ಶಿ ಫಾರೂಕ್, ಹೈದರ್ ಮಿಲ್ ರವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವೊಂದು ದಾನಿಗಳು ಈ ಸತ್ಕಾರ್ಯಕ್ಕೆ ಅಗತ್ಯವಿದ್ದ ಸಾಮಾಗ್ರಿಗಳಿಗೆ ಧನಸಹಾಯವನ್ನು ಹಾಗೂ ಈ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಾಂಡಿದ್ದ ವಿಖಾಯ ಸದಸ್ಯರಿಗೆ ಊಟದ ವ್ಯವಸ್ಥೆಯನ್ನು ನೀಡಿ ಸಹಕರಿಸಿದ್ದಾರೆ.

Latest News

Related Posts