ಗುಡ್ಡ ಕುಸಿತ-ತಪ್ಪಿದ ಅನಾಹುತ

ಗುಡ್ಡ ಕುಸಿತ-ತಪ್ಪಿದ ಅನಾಹುತ
Facebook
Twitter
LinkedIn
WhatsApp

ಬೆಳ್ತಂಗಡಿ: ಜೂನ್ 16ರ ಸಂಜೆ ಸುರಿದ ಭಾರೀ ಮಳೆಗೆ ಮನೆಯ ಪಕ್ಕದ ಬಂಡೆಕಲ್ಲು ಸಹಿತ ಗುಡ್ಡವೊಂದು ಕುಸಿದು ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸವಣಾಲು ರಸ್ತೆಯಲ್ಲಿ ನಡೆದಿದೆ.ಲಾಯಿಲ ಗ್ರಾಮದ ಹೆರಾಜೆ ಸಮೀಪದ ಹಸನಬ್ಬ ಎಂಬವರ ಮನೆಯ ಪಕ್ಕದ ಗುಡ್ಡ ಕುಸಿದಿದ್ದು ದೊಡ್ಡ ದೊಡ್ಡ ಕಲ್ಲುಗಳು ಮನೆಯ ಗೋಡೆಯ‌ ಪಕ್ಕದಲ್ಲೇ ಉರುಳಿ ಬಿದ್ದಿದೆ. ಅದರೆ ಮನೆಯ ಗೋಡೆಗೆ ಸಣ್ಣಪುಟ್ಟ ಹಾನಿಯಾಗಿದ್ದು, ಸುದೈವವಶಾತ್ ದೊಡ್ಡ ಅನಾಹುತ ತಪ್ಪಿದೆ.

Latest News

Related Posts