ಬೆಳ್ತಂಗಡಿ: ಧರ್ಮಸ್ಥಳ ಯೋಜನೆಯ ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ತಂಡದವರು ಜೂನ್ 17ರಂದು ಈ ದಿನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿರುವ ಕಪಿಲಾ ನದಿಯ ಕಿಂಡಿ ಅಣೆಕಟ್ಟು ಸ್ವಚ್ಚ ಗೊಳಿಸುವಕಾರ್ಯ ಮಾಡಿದರು. ಪ್ರತೀ ವರ್ಷ ಇಲ್ಲಿ ಮಳೆಗಾಲದಿಂದ ಕೃತಕ ನೆರೆ ಬರುತ್ತಿತ್ತು. ಇದನ್ನು ಮನಗಂಡ ವಿಪತ್ತು ಸದಸ್ಯರು ಮೊದಲೆ ಕಿಂಡಿ ಅಣೆಕಟ್ಟು ಸ್ವಚ್ಚಗೊಳಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಿದರು. ಕೊಕ್ಕಡ ವಲಯದ ವಿಪತ್ತು ನಿರ್ವಹಣಾ ಸಮಿತಿಯ ಶೀನಪ್ಪ ಶಿಶಿಲ, ಮಾಧವ ದೇನೋಡಿ, ಗಿರಿಜಾ ಕೆದಿಲಾಯ, ಶಿವಪ್ರಸಾದ್, ರಮೆಶ ಬೈರಕಟ್ಟ, ಜಗದೀಶ ಶಿಶಿಲ, ಗಂಗಾಧರ ಶಿಶಿಲ, ಪ್ರವೀಣ್ ಪತ್ತಿಮಾರ್, ಸ್ಥಳೀಯರಾದ ಮೋಹನ ಗುತ್ತು, ಕೊರಗಪ್ಪ ಗಾಣದಕೊಟ್ಟಿಗೆ ಮೊದಲಾದವರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.






