ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯು ಸಂಕಷ್ಟದಲ್ಲಿರುವ ಸಮಾಜಭಾಂದವರಿಗೆ ಆಸರೆಯಾಗುವ ಉದ್ದೇಶದಿಂದ ‘ಶ್ರೀ ಗುರು ಸೇವೆ’ ಎಂಬ ಸೇವಾಯೋಜನೆಯನ್ನು ಪ್ರಾರಂಭಿಸಿದ್ದು, ಐದನೇ ಸೇವಾಯೋಜನೆಯಾಗಿ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಾಡ್ಕ ಮನೆಯ ರೇವತಿ ಹಾಗೂ ಜನಾರ್ದನ ಪೂಜಾರಿ ಯವರ ಪ್ರಥಮ ಪುತ್ರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಬಾಲಕಿಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಬೇಕಾಗಿರುವುದರಿಂದ ಬಡ ಕುಟುಂಬಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಜೂನ್ 16 ರಂದು ಅವರ ಮನೆಗೆ ಬೇಟಿ ನೀಡಿ ಸಮಾಜದ ದಾನಿಗಳಿಂದ ಸಂಗ್ರಹಿಸಿದ್ದ ರೂಪಾಯಿ 15,000/- ಆರ್ಥಿಕ ನೆರವನ್ನು ಬೆಳ್ತಂಗಡಿ ತಾಲ್ಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ರಂಜಿತ್ ಎಚ್. ಡಿ. ಬಳಂಜ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಯುವ ಬಿಲ್ಲವ ವೇದಿಕೆಯ ಉಪಾಧ್ಯಕ್ಷರುಗಳಾದ ಪುನೀತ್ ಕುಮಾರ್ ಮಡಂತ್ಯಾರ್, ಮತ್ತು ಗುರುಪ್ರಸಾದ್ ಉಜಿರೆ, ಕೋಶಾಧಿಕಾರಿ ಹರೀಶ್ ಕಲ್ಲಾಜೆ ಶಿರ್ಲಾಲ್, ತಾಲೂಕು ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷರಾದ ಚಿದಾನಂದ ಇಡ್ದ್ಯಾ, ಬಲಿಷ್ಠ ಬಿಲ್ಲವೆರ್ ತಂಡದ ಸಂಪತ್ ಅಂಚನ್, ಸಂದೀಪ್ ಪೂಜಾರಿ ಕುಕ್ಕೇಡಿ, ಪ್ರಜ್ವಲ್ ಬಿರ್ವ ಮದ್ದಡ್ಕ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ತಣ್ಣೀರುಪಂಥ ಇದರ ಮಾಜಿ ಕಾರ್ಯದರ್ಶಿ ಸತೀಶ್ ಕರ್ಕೇರ ದೇಶಿನ್ಕೋಡಿ, ಅರುಣ್ ಕುಮಾರ್ ಅಲಕ್ಕೆ ತಣ್ಣೀರುಪಂಥ ಮತ್ತಿತರರು ಉಪಸ್ಥಿತರಿದ್ದರು.






