ಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 4098 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾl ಶಶಿಕಾಂತ್ ಜೈನ್ ತಿಳಿಸಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗ: ಶ್ರೇಯಾ ಆರ್. ನಾಯ್ಕ, ಉಪ್ಪುಂದ, ಉಡುಪಿ ಜಿಲ್ಲೆ.(ಪ್ರಥಮ) ಧೃತಿ ವಿ. ಮೊಯಿಲಿ, ಪಡುಮಾರ್ನಾಡು, ಮೂಡಬಿದ್ರೆ (ದ್ವಿತೀಯ) ಜಸ್ಟಿನ್ ವಾಸ್, ಬಂಟ್ವಾಳ (ತೃತೀಯ)ಪ್ರೌಢಶಾಲಾ ವಿಭಾಗ: ಭಾವನಾ ದೇವಾನಂದ ಬಿದರಿ, ಹುನಗುಂದ, ಬಾಗಲಕೋಟೆ (ಪ್ರಥಮ) ಅಪೂರ್ವ, ಬೆಳಾಲು, ಬೆಳ್ತಂಗಡಿ (ದ್ವಿತೀಯ) ತೇಜಸ್ವಿ ನಾರಾಯಣ, ಧರ್ಮಸ್ಥಳ (ತೃತೀಯ)ಕಾಲೇಜು ವಿಭಾಗ: ನಕ್ಷ ಕಲ್ಕೂರ, ಕುಂದಾಪುರ (ಪ್ರಥಮ) ಅಕ್ಷಿತಾ ಶೆಟ್ಟಿ, ಹೆಬ್ರಿ (ದ್ವಿತೀಯ) ಮಧುರಾ, ಎಚ್. ವಿ., ಕುಂಟೆಬೈಲ್, ಶೃಂಗೇರಿ (ತೃತೀಯ)ಸಾರ್ವಜನಿಕ ವಿಭಾಗ:ಸಂಸ್ಕೃತಿ ಶೆಟ್ಟಿ, ಕೆ. ಸುರತ್ಕಲ್, ಮಂಗಳೂರು (ಪ್ರಥಮ) ಸುಧಾ, ಕೆ. ಕನ್ಯಾನ – ಕೋಡಿ, ಬ್ರಹ್ಮಾವರ (ದ್ವಿತೀಯ)ಪ್ರಮೀಳಾ, ಪುಂಜಾಲಕಟ್ಟೆ (ತೃತೀಯ)







