ಎಂಎಲ್‌ಸಿ ಹರೀಶ್ ಕುಮಾರ್ ಸಿಯೋನ್ ಆಶ್ರಮಕ್ಕೆ ಭೇಟಿ

ಎಂಎಲ್‌ಸಿ ಹರೀಶ್ ಕುಮಾರ್ ಸಿಯೋನ್ ಆಶ್ರಮಕ್ಕೆ ಭೇಟಿ
Facebook
Twitter
LinkedIn
WhatsApp

ಬೆಳ್ತಂಗಡಿ: ವಿಧಾನ ಪರಿಷತ್ತಿನ ಶಾಸಕರಾದ ಕೆ. ಹರೀಶ್ ಕುಮಾರ್‌ರವರು ಜೂನ್ 21  ರಂದು ನೆರಿಯ ಸಿಯೋನ್ ಆಶ್ರಮ ಬೇಟಿ ನೀಡಿ, ಆಶ್ರಮಕ್ಕೆ ಆಹಾರ ಕಿಟ್ ನೀಡಿ ಆಶ್ರಮದ ಟ್ರಸ್ಟಿಗಳಾದ ಯು. ಸಿ. ಪೌಲೋಸ್‌ರವರ ಜೊತೆಗೆ ಮಾತುಕತೆ ನಡೆಸಿದರು. ಅವರು ಕೊರೋನಸಂದರ್ಭದಲ್ಲಿ ಆಶ್ರಮವಾಸಿಗಳ ಸಂಕಷ್ಟ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು.  ಈ ಸಂಧರ್ಭದಲ್ಲಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ನಮೀತಾ ಕೆ. ಪೂಜಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹಾಗೂ ನೆರಿಯ ಗ್ರಾಮ ಪಂಚಾಯತ್ ಹಾಲಿ ಸದಸ್ಯ ಬಿ. ಅಶ್ರಫ್ ನೆರಿಯ, ಬೆಳ್ತಂಗಡಿ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಅಬಿನಂದನ್ ಹರೀಶ್ ಕುಮಾರ್, ನೆರಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಮಹಮ್ಮದ್, ಸದಸ್ಯರಾದ ರಮೇಶ್ ಕೆ. ಎಸ್., ತೋಮಸ್ ವಿ. ಡಿ., ರೀನಾ ಶಿಜು, ಮಾಜಿ ಅಧ್ಯಕ್ಷರಾದ ಪಿ. ಕೆ. ರಾಜನ್, ಕಾಂಗ್ರೆಸ್ ಪಕ್ಷದ ನೆರಿಯ ಗ್ರಾಮ ಸಮಿತಿ ಅಧ್ಯಕ್ಷರಾದ ಎಂ. ಜೆ. ಸೆಬಾಸ್ಟಿನ್,ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಅಲಂಗಾಯಿ, ಕೇಶವ ಪೂಜಾರಿ ನೆರಿಯ, ಶಿಜು ಸರೋಳಿಕಾಡು, ಶಾಜು ಉಪಸ್ಥಿತರಿದ್ದರು.                           

Latest News

Related Posts