ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ನಡ ಘಟಕದಿಂದ ಗಿಡ ನಾಟಿ ಕಾರ್ಯಕ್ರಮ

ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ನಡ ಘಟಕದಿಂದ ಗಿಡ ನಾಟಿ ಕಾರ್ಯಕ್ರಮ
Facebook
Twitter
LinkedIn
WhatsApp

ಬೆಳ್ತಂಗಡಿ: ನಡ /ಕನ್ಯಾಡಿ ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತಂಡದ ವಾರ್ಷಿಕೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮವು ಜೂನ್ 23ರಂದು ನಡೆಯಿತು.ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯ್ಸ್, ಹಾಗೂ ಉಪವಲಯ ಅರಣ್ಯ ಅಧಿಕಾರಿ ರಾಜೇಶ್ ಅವರು ಗಿಡ ನಾಟಿಗೆ ಚಾಲನೆ ನೀಡಿ ಶುಭ ಹಾರೈಸಿದರು.ಶಾಲಾ ಮೈದಾನದ ಸುತ್ತ ಸುಮಾರು ಆರುವತ್ತಕ್ಕೂ ಅಧಿಕ ವಿವಿಧ ಬಗೆಯ  ಹಣ್ಣು ಹಂಪಲುಗಳ  ಗಿಡಗಳನ್ನು ನಾಟಿ ಮಾಡಲಾಯಿತು. ವಿಜಯ ಗೌಡ  ಗಿಡ ನೆಡುವುದರ ಮೂಲಕ ವಿಪತ್ತು ನಿರ್ವಹಣಾ ಘಟಕದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ್ ಪಟಗಾರ್, ಉಪ ವಲಯ ಅರಣ್ಯ ಅಧಿಕಾರಿ ರಾಜೇಶ್ ನಾವೂರು, ಉಪ ಅರಣ್ಯ ಅಧಿಕಾರಿ ರವೀಂದ್ರ ಕೆ., ಅರಣ್ಯ  ರಕ್ಷಕರಾದ ಸುಭಾಷ್, ರಾಘವೇಂದ್ರ ಬೆಳ್ತಂಗಡಿ, ಗ್ರಾಮೀಣಾಭಿವೃದ್ಧಿ ಯೋಜನೆಯ ವಲಯದ ಮೇಲ್ವಿಚಾರಕಿ ಮಮತಾ, ಶಾಲಾ. ಮುಖ್ಯ ಶಿಕ್ಷಕಿ ಪುಷ್ಪಾ, ಸಹ ಶಿಕ್ಷಕರಾದ ವಿಕ್ಟರ್ ಮಾಡ್ತ ಹಾಗೂ ಸುಜಾತಾ, ನಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಗೌಡ, ಪಂಚಾಯತ್ ಡಾಟಾ ಆಪರೇಟರ್ ಜಾಹಿರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ್ ಗೌಡ, ನಡ /ಕನ್ಯಾಡಿ ವಿಭಾಗದ ಸೇವಾಪ್ರತಿನಿಧಿಯವರು,   ಧರ್ಮಸ್ಥಳ  ವಿಪತ್ತು ನಿರ್ವಹಣಸ  ಘಟಕದ ಸಂಯೋಜಕರಾದ ಸ್ವಸ್ತಿಕ್ ಕನ್ಯಾಡಿ, ಇಂದಬೆಟ್ಟು ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ನಡ /ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ವಸಂತಿ, ನಡ /ಕನ್ಯಾಡಿ ಘಟಕದ ಎಲ್ಲಾ ಸ್ವಯಂ ಸೇವಕರು ಭಾಗವಹಿಸಿದ್ದರು.

Latest News

Related Posts