ಸ್ಪಂದನ ಸೇವಾ ಸಂಘದಿಂದ ನೆರವು

ಸ್ಪಂದನ ಸೇವಾ ಸಂಘದಿಂದ ನೆರವು
Facebook
Twitter
LinkedIn
WhatsApp

ಬೆಳ್ತಂಗಡಿ: ಇಳಂತಿಲ ಗ್ರಾಮದ ಕೊಡಂಗೆ ನಿವಾಸಿ ನೀಲಯ್ಯ ಗೌಡರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ತೀರ ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯ ಧನ ಸಹಾಯ ರೂ.20,000/- ದ ಚೆಕ್ಕನ್ನು  ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ಯುವರಾಜ ಗೌಡ ಅನಾರು ಮೂಲಕ ಫಲಾನುಭವಿಗೆ  ಹಸ್ತಾಂತರ ಮಾಡಲಾಯಿತು.ಈ ಸಂದರ್ಭ  ವಾಣಿ ಸೌಹಾರ್ದ ಕೋ-ಆಪರೇಟಿವ್(ಲಿ.) ನಿರ್ದೇಶಕ ಸುರೇಶ್ ಕೌಡಂಗೆ, ಸ್ಥಳೀಯರಾದ ಕಾರ್ತಿಕ್ ಗೌಡ ಅನ್ನಾಜೆ, ಲೋಕೇಶ್ ಗೌಡ ಕಂಗಿನಾರುಬೆಟ್ಟು, ಸುಬ್ರಹ್ಮಣ್ಯ ಗೌಡ ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರುಗಳಾದ ಸೀತಾರಾಮ್ ಬೆಳಾಲು ಹಾಗೂ ನಿತಿನ್ ಕನ್ಯಾಡಿ ಉಪಸ್ಥಿತರಿದ್ದರು. 

Latest News

Related Posts