ಕೋವಿಡ್‌ನಿಂದ ಮೃತರಾದ ಕುಟುಂಬಗಳ ಸಂದರ್ಶನ, ನೆರವು – ಉಲಮಾಗಳಿಗೂ‌ ಸ್ಪಂದನೆ

ಕೋವಿಡ್‌ನಿಂದ ಮೃತರಾದ ಕುಟುಂಬಗಳ ಸಂದರ್ಶನ, ನೆರವು – ಉಲಮಾಗಳಿಗೂ‌ ಸ್ಪಂದನೆ
Facebook
Twitter
LinkedIn
WhatsApp

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ತಂಙಳ್ ಕೂರತ್‌ರವರ ನಿರ್ದೇಶನದಂತೆ ಬೆಳ್ತಂಗಡಿ ತಾಲೂಕು ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಇವರು ಬೆಳ್ತಂಗಡಿ ತಾಲೂಕಿನಾದ್ಯಂತ ಕೋವಿಡ್‌ನಿಂದ ಮರಣಹೊಂದಿದವರ ಮನೆಗಳಿಗೆ ಸಂದರ್ಶನ ನೀಡಿ ಆಹಾರ ಕಿಟ್ ಹಾಗೂ ಕೆಲಸವಿಲ್ಲದೇ ಮನೆಯಲ್ಲಿರುವ ಉಲಮಾಗಳಿಗೆ ಆಹಾರ ಕಿಟ್ ಹಾಗೂ ಧನ ಸಹಾಯ ವಿತರಣೆ ನಡೆಸಿದರು.ಗುರುವಾಯನಕೆರೆ ಶೈಖ್ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ವಠಾರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಅಬ್ದುರ್ರಶೀದ್ ಬಲಿಪಾಯ ನೆರಿಯ, ಹಂಝ ಮದನಿ ಗುರುವಾಯನಕೆರೆ, ಸಮಾಜ ಸೇವಕ ಅಬ್ಬೋನು ಮದ್ದಡ್ಕ, ಕಾಸಿಮ್ ಮುಸ್ಲಿಯಾರ್ ಮಾಚಾರು, ಗುರುವಾಯನಕೆರೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ ಎಸ್‌ಎಂಎಸ್, ಯಾಕೂಬ್ ಮುಸ್ಲಿಯಾರ್ ಗುರುವಾಯನಕೆರೆ ಮತ್ತಿತರರು ಹಾಜರಿದ್ದರು.

Latest News

Related Posts