ಪೆಟ್ರೋಲ್ ಬೆಲೆ ಲೀಟರಿಗೆ ರೂಪಾಯಿ 100/- ದಾಟಿದರೇನು…. ಬಂಗುಡೆ ಮೀನಿಗೆ ಕಿಲೋಗೆ 200/- ರೂಪಾಯಿ ಆಗಿಲ್ಲವಾ…..

ಪೆಟ್ರೋಲ್ ಬೆಲೆ ಲೀಟರಿಗೆ ರೂಪಾಯಿ 100/- ದಾಟಿದರೇನು…. ಬಂಗುಡೆ ಮೀನಿಗೆ ಕಿಲೋಗೆ 200/- ರೂಪಾಯಿ ಆಗಿಲ್ಲವಾ…..
Facebook
Twitter
LinkedIn
WhatsApp

ಬೆಳ್ತಂಗಡಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಿಲ್ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಮಾಧ್ಯಮಗಳು ಹಾಗೂ ಸಾಕಷ್ಟು ಜನಸಾಮಾನ್ಯರು ಆತಂಕ ವ್ಯಕ್ತಪಡಿಸಿದಾಗ ಆಕ್ರೋಶ ವ್ಯಕ್ತಪಡಿಸಿದ ಕೆಲ ಯುವಕ ಮಿತ್ರರು ‘ಪೆಟ್ರೋಲ್ ಬೆಲೆ ರೂಪಾಯಿ 100/- ದಾಟಿದರೇನು? ಬಂಗುಡೆ ಮೀನಿಗೆ ಕಿಲೋಗೆ 200/-ರೂಪಾಯಿ ಆಗಿಲ್ಲವಾ? ನಾವೇನು ಬಂಗುಡೆ ಮೀನು ತಿನ್ನೋದನ್ನು ಬಿಟ್ಟಿದ್ದೇವಾ? ಅಂತೆಯೇ ಪೆಟ್ರೋಲ್ ಬೆಲೆ ಲೀಟರಿಗೆ 200/- ಆದರೂ ನಾವು ತಿರುಗುವುದನ್ನು ಬಿಡೋದಿಲ್ಲ’ ಎಂದು ತಿರುಗೇಟು ನೀಡಿದ್ದರು.ನಾನೇನೋ ಇದು ಬಿಸಿರಕ್ತದ ಯುವಕರು ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಂಧಾಭಿಮಾನದದ ವ್ಯಕ್ತ ಪಡಿಸಿದ ಅಭಿಪ್ರಾಯ ಎಂದು ಭಾವಿಸಿದ್ದೆ. ಆದರೆ ಜೂನ್ 28ರ ಸೋಮವಾರ ಬೆಳ್ತಂಗಡಿ ಪೇಟೆಯಲ್ಲಿ ಮಿತಿಮೀರಿದ ವಾಹನಗಳ ಎಗ್ಗಿಲ್ಲದ ಓಡಾಟವನ್ನು ಕಂಡ ಯಾರಿಗೂ ಅನಿಸದಿರದು ‘ಪೆಟ್ರೋಲ್ ಬೆಲೆ ಲೀಟರಿಗೆ 200/- ಆದರೂ ಜನರ ಅನಗತ್ಯ ತಿರುಗಾಟಗಳಿಗೆ ಬ್ರೇಕ್ ಬೀಳಲಿಕ್ಕಿಲ್ಲ. ಸರಕಾರ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ ಸಹಿತ ಸಾಕಷ್ಟು ಬಿಗಿ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ; ಬೆಳ್ತಂಗಡಿ ಪೇಟೆಯಲ್ಲಿ ಮಾತ್ರ ಇದು ಯಾವುದಕ್ಕೂ ಕವಡೆ ಕಾಸಿನ ಬೆಲೆಯೂ ಇದ್ದಂತಿಲ್ಲ. ಜೂನ್ 28ರಂದು ಬೆಳ್ತಂಗಡಿ ಪೇಟೆಯಲ್ಲಿ ಬೆಂಗಳೂರಿನ ಚಿಕ್ಕಪೇಟೆಯಂತಹ ಜನದಟ್ಟಣೆಯ ಗಲ್ಲಿಗಳನ್ನೂ ನಾಚಿಸುವಂತೆ ಎಲ್ಲ ನಿಯಮ-ನಿಬಂದನೆಗಳಿಗೆ ಸವಾಲಾಗಿ ಕಂಡ ವಾಹನ ದಟ್ಟಣೆ ಹಾಗೂ ಜನಜಂಗುಳಿ ಕಂಡಾಗ ಪೆಟ್ರೋಲ್ ಬೆಲೆ ಏರಿಕೆಯ ಆತಂಕ ಮಾತ್ರವಲ್ಲ, ಕೊರೋನಾ ಸೋಂಕಿನ ಭಯವೂ ಯಾರಿಗೂ ಇದ್ದಂತಿಲ್ಲ.ಬೆಳ್ತಂಗಡಿ ಪೇಟೆಯಲ್ಲಿ ಜೂನ್ 28ರ ದೃಶ್ಯ ಕಂಡಾಗ ರಾಜ್ಯ ಸರಕಾರದ ಸೂಚನೆ-ನಿಯಮ ಹಾಗೂ ಮಾರ್ಗಸೂಚಿಗಳನ್ನು ಧಿಕ್ಕರಿಸಿ, ಸಾವಿರಾರು ವಾಹನಗಳಲ್ಲಿ ಬರುವ ಮಂದಿಯನ್ನು ನಿಯಂತ್ರಿಸಲು ಪೊಲೀಸ್ ಸಹಿತ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟ. ಇಂತಹ ಸಂದರ್ಭಗಳಲ್ಲಿ ತಾಲೂಕಿನಲ್ಲಿ ಸಂವಿಧಾನವನ್ನು ಗೌರವಿಸಿ, ಕಾನೂನಿನ ಚೌಕಟ್ಟಿನಲ್ಲಿ ಬದುಕು ಕಟ್ಟಿಕೊಂಡಿರುವ ತಾಲೂಕಿನ ಒಟ್ಟು ಜನಸಂಖ್ಯೆಯ 90% ಕ್ಕಿಂತಲೂ ಹೆಚ್ಚು ಜನರ ಮನದಲ್ಲಿ ‘ಇದನ್ನು ನಿಯಂತ್ರಿಸಲು ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಯಾಗಿ ಈ ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಇರಬೇಕಿತ್ತು’ ಎಂಬ ಅನಿಸಿಕೆ ಮೂಡುತ್ತಿದೆ.

Latest News

Related Posts