ಸ್ಪಂದನಾ ಸೇವಾ ಸಂಘದಿಂದ ನೆರವು

ಸ್ಪಂದನಾ ಸೇವಾ ಸಂಘದಿಂದ ನೆರವು
Facebook
Twitter
LinkedIn
WhatsApp

ಬೆಳ್ತಂಗಡಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮುಂಡತ್ತೋಡಿ ಪೂರ್ಣಿಮಾ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ವತಿಯಿಂದ ರೂಪಾಯಿ 15,000/- ದ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ಉಷಾದೇವಿ ಕಿನ್ಯಾಜೆ ಇವರ ಮೂಲಕ ಫಲಾನುಭವಿಗೆ ಜೂನ್ 29ರಂದು ಹಸ್ತಾಂತರ ಮಾಡಲಾಯಿತು.ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕರಾದ ಆನಂದ ಗೌಡ ಉಜಿರೆ, ವಾಣಿ ಸೌಹಾರ್ದ ಕೋ-ಆಪರೇಟಿವ್ (ಲಿ.) ನಿರ್ದೇಶಕ ಗೋಪಾಲಕೃಷ್ಣ ಜಿ. ಕೆ. ಉಜಿರೆ, ಸುರೇಶ್ ಕೌಡಂಗೆ, ತಾಲೂಕು ಯುವ ವೇದಿಕೆಯ ನಿರ್ದೇಶಕರುಗಳಾದ ತಿಕ್ಷೀತ್ ದಿಡುಪೆ, ನಿತಿನ್ ಗೌಡ ಕನ್ಯಾಡಿ, ಉಜಿರೆ ಗ್ರಾಮ ಸಮಿತಿ ಕಾರ್ಯದರ್ಶಿಗಳಾದ ಧರ್ಣಪ್ಪ ಗೌಡ ಧರಣಿ, ಸ್ಪಂದನಾ ಸೇವಾ ಸಂಘದ ಸದಸ್ಯರಾದ ಉಮೇಶ್ ಗೌಡ ಮೈರ್ನೋಡಿ ಹಾಗೂ ಸ್ಥಳೀಯ ಗ್ರಾಮದ ಸ್ವಜಾತಿ ಬಾಂಧವರುಗಳಾದ ವಿಜಯ ಗೌಡ ಮುಂಡತ್ತೋಡಿ, ಜಯಂತ ಗೌಡ ಉಪಸ್ಥಿತರಿದ್ದರು.

Latest News

Related Posts