ಬೆಳ್ತಂಗಡಿ: ಗ್ರಾಮ ಮಟ್ಟದಲ್ಲಿ ಕೊರೋನ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಿರಿಯ ಅರೋಗ್ಯ ಮಹಿಳಾ ಸಹಾಯಕಿಯರುಗಳ ಜನಸೇವೆಯನ್ನು ಗುರುತಿಸಿ ಅವರಿಗೆ ಮಾಸ್ಕ್, ಗ್ಲೌಸ್ ಹಾಗೂ ಸೇನಿಟೈಸರ್ ಜೊತೆಗೆ ಗೌರವಧನವನ್ನು ಕಡಿರುದ್ಯಾವರ ಗ್ರಾಮ ಪಂಚಾಯತ್ ವತಿಯಿಂದ ನೀಡಲಾಯಿತು.ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜುಲೈ 2ರಂದು ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಳ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಆಶಾ ಕಾರ್ಯಕರ್ತೆಯರಾದ ಭಾರತಿ ಕೊಂದೋಡಿ, ಯಶೋಧಾ, ವಿನಯ ಆರ್. ಗೌಡ, ಶಾರದಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಯು, ಸವಿತಾ ಎ. ಪಿ., ಜಯಶ್ರೀ ಇವರಿಗೆ ಪಂಚಾಯತ್ ವತಿಯಿಂದ ಗೌರವಧನ ವನ್ನು ವಿತರಿಸಲಾಯಿತು.ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬೇಬಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಕೀರ್ತಿ ಹೆಚ್. ಬಿ. ಹಾಗೂ ಪಂಚಾಯತ್ ಸದಸ್ಯರುಗಳಾದ ರಾಜೇಶ್, ಸೂರಜ್ ವಳಂಬ್ರ, ಗುರುಪ್ರಸಾದ್, ಸಾವಿತ್ರಿ, ರತ್ನಾವತಿ, ನಳಿನಿ, ಲಾವಣ್ಯ, ಪಂಚಾಯತ್ ಸಿಬ್ಬಂದಿಗಳಾದ ಮಾಲತಿ, ತ್ರಿವೇಣಿ, ವಿತೇಶ್ ಕೋಟ್ಯಾನ್, ದೀಪಕ್ ಪಿ. ಮತ್ತಿತರರು ಉಪಸ್ಥಿತರಿದ್ದರು.






