ಪರಿಸರದೊಂದಿಗೆ ಪತ್ರಿಕಾ ದಿನಾಚರಣೆ ಮಾದರಿಕಾರ್ಯ -ಪ್ರತಾಪ್‌ಸಿಂಹ ನಾಯಕ್

ಪರಿಸರದೊಂದಿಗೆ ಪತ್ರಿಕಾ ದಿನಾಚರಣೆ ಮಾದರಿಕಾರ್ಯ -ಪ್ರತಾಪ್‌ಸಿಂಹ ನಾಯಕ್
Facebook
Twitter
LinkedIn
WhatsApp

ಬೆಳ್ತಂಗಡಿ: ಜಗತ್ತಿನಲ್ಲಿ ನವ ಮಾಧ್ಯಮಗಳು ಪರಿಣಾಮಕಾರಿಯಾಗಿ ಸುದ್ದಿ ಪ್ರಸಾರ ಮಾಡುತ್ತಿವೆ. ಆ ಮೂಲಕ ಜಗತ್ತಿನ ಮೂಲೆ ಮೂಲೆಯನ್ನು ಕ್ಷಣಮಾತ್ರದಲ್ಲಿ ಸುದ್ದಿ ತಲುಪಲು ಸಾಧ್ಯವಾಗಿದೆ.  ಸಮಾಜಮುಖಿ‌ ಕಾರ್ಯವಾದ ಗಿಡನಾಟಿ ಕಾರ್ಯ ಹಮ್ಮಿಕೊಂಡು ಪತ್ರಿಕಾ ದಿನಾಚರಣೆ ನಡೆಸಿರುವುದು  ಪರಿಸರ ಪರವಾದ ನಡೆಯನ್ನು ಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಅವರು ಕಳೆಂಜ ನಂದಗೋಕುಲ ಗೋ ಶಾಲೆಯಲ್ಲಿ ಬೆಳ್ತಂಗಡಿ ಮೀಡಿಯಾ ಕ್ಲಬ್ ಹಮ್ಮಿಕೊಂಡಿದ್ದ ಶ್ರಮದಾನದೊಂದಿಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರಾದೇಶಿಕ ಹಾಗೂ ಗ್ರಾಮಾಂತರ ಪ್ರದೇಶದ  ಕಾರ್ಯಕ್ರಮಗಳ ವಿಸ್ತೃತ ವರದಿಗಳಿಂದ ಧನಾತ್ಮಕ ಬದಲಾವಣೆಗಳು ಉಂಟಾದ  ನಿದರ್ಶನಗಳನ್ನು ಕಾಣಬಹುದು. ಕೆಲವೇ ಕ್ಷಣಗಳಲ್ಲಿ ನವಮಾಧ್ಯಮಗಳ ಮೂಲಕ ಪ್ರಪಂಚದ ಮೂಲೆ‌ಮೂಲೆಯನ್ನು ಸುದ್ದಿಗಳು ತಲುವಂತಹಾ ಕ್ರಾಂತಿ ಉಂಟಾಗಿದೆ‌. ಕೊರೋನಾದಂತಹಾ ಸಂಕಷ್ಟ ಕಾಲದಲ್ಲೂ ಮಾಧ್ಯಮಗಳು  ಉತ್ತಮ ರೀತಿಯಲ್ಲಿ ಸಮಾಜಕ್ಕೆ ‌ಸಂದೇಶ ಸಾರುವಲ್ಲಿ ಸಫಲರಾಗಿದ್ದಾರೆ ಎಂದರು.ಬೆಳ್ತಂಗಡಿ ರೋಟರಿ ಕ್ಲಬ್  ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತಿರುವ ಪರಿಣಾಮ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ರೋಟರಿ ಸೇರಿದಂತೆ ತಾಲೂಕಿನ ಸಂಘ ಸಂಸ್ಥೆಗಳ ವಿಚಾರಗಳು ಹೊರಜಗತ್ತನ್ನು ತಲುಪುವಂತಾಗಿದೆ ಎಂದರು.ನ್ಯಾಯವಾದಿ  ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಸಮಾಜ ಸದೃಢವಾಗಬೇಕಾದರೆ ಸಮಾಜದ ನಾಲ್ಕನೇ ಅಂಗದಂತಿರುವ ಮಾಧ್ಯಮಗಳು ಸುದ್ದಿಯನ್ನು ‌ಪರಿಣಾಮಕಾರಿಯಾಗಿ‌ ತಲುಪಿಸುವ ಪ್ರಯತ್ನ ಮಾಡಬೇಕು. ‌ಪರಿಸರ ಉಳಿಸುವ ಯತ್ನದಲ್ಲಿ  ಪತ್ರಕರ್ತರು ಕೈಜೋಡಿಸಿರುವುದು ಮಾದರಿಯಾಗಿದೆ. ಈ ಮೂಲಕ ಮುಂದೆ ತಲೆದೋರಲಿರುವ ಜಾಗತಿಕ ತಾಪಮಾನ‌ ಏರಿಕೆಯಂತಹಾ ಅಪಾಯ ತಪ್ಪಿಸಲು ಸಹಕಾರಿಯಾಗಲಿದೆ ಎಂದರು.ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮದ ಟ್ರಸ್ಟ್‌ನ‌ ಅಧ್ಯಕ್ಷ ಡಾl ಎಂ. ಎಂ. ದಯಾಕರ್ ಮಾತನಾಡಿ, ಗೋಪಾಲನೆ ಮಾಡುವ ಉದ್ದೇಶದಿಂದ ನಂದಗೋಕುಲ ಗೋಶಾಲೆ ಆರಂಭಿಸಲಾಗಿದ್ದು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದೆ ಗೋವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ. ಗಿಡನಾಟಿ  ಕಾರ್ಯಕ್ರಮ ಪರಿಸರ ಮೇಲಿರುವ ಪ್ರೀತಿ ಹಾಗೂ ಕಾಳಜಿಯನ್ನು ಬಿಂಬಿಸುತ್ತದೆ ಎಂದರು.ಸುಮಾರು 75ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಯಿತು. ಶ್ರಮದಾನದಲ್ಲಿ  ಮೀಡಿಯಾ ಕ್ಲಬ್‌ನ‌ 15 ಸದಸ್ಯರು ಭಾಗವಹಿಸಿದ್ದರು.ಉದ್ಯಮಿ ಪ್ರಭಾಕರ ಹೆಗ್ಡೆ , ರೋಟರಿ ಕ್ಲಬ್ ಕಾರ್ಯದರ್ಶಿ ಅಬುಬಕ್ಕರ್, ಉದ್ಯಮಿ ಮೋಹನ್ ಛೌದರಿ, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮದ ಟ್ರಸ್ಟಿ ಭಾಸ್ಕರ ಧರ್ಮಸ್ಥಳ ಹಾಗೂ ನವೀನ್ ನೆರಿಯ, ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಎ. ಪಿ., ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಗೌಡ ಮತ್ತಿತರರು ಉಪಸ್ಥಿತರಿದ್ದರು.ಮೀಡಿಯಾ ಕ್ಲಬ್ ಅಧ್ಯಕ್ಷ ಸತೀಶ್ ಪೆರ್ಲೆ  ಪ್ರಾಸ್ತಾವಿಸಿದರು. ಕ್ಲಬ್‌ನ ಕೋಶಾಧಿಕಾರಿ ಶರತ್ ಸ್ವಾಗತಿಸಿ, ಕಾರ್ಯದರ್ಶಿ ಉಮೇಶ್ ಕುಲಾಲ್ ವಂದಿಸಿದರು. ಹರ್ಷಿತ್ ಪಿಂಡಿವನ ನಿರೂಪಿಸಿದರು.

Latest News

Related Posts