ಪತ್ನಿಯನ್ನು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡು ಹೋದ ಹೊಸ ಅಳಿಯ!

Facebook
Twitter
LinkedIn
WhatsApp

ಬೆಳ್ತಂಗಡಿ: ದೊಡ್ಡ ಮಗಳನ್ನು 9 ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತ ನಾದಿನಿಯ ಜೊತೆ ಸಲುಗೆಯಿಂದಿದ್ದು, ಇದೀಗ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡುಹೋದ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿಂದ ವರದಿಯಾಗಿದೆ. ನಾಪತ್ತೆಯಾಗಿರುವ ಯುವತಿಯ ತಂದೆ ಮುಹಮ್ಮದ್ ಅವರು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು, ಮಗಳು ಹಾಗೂ ಅಳಿಯ ಆಗಾಗ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ ರೈಹಾನಳ ಜೊತೆಗೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ ಪೋನ್ ಮುಖಾಂತರ ಕೂಡ ಮಾತನಾಡುತ್ತಿದ್ದರು. ಇತ್ತೀಚೆಗೆ ದೊಡ್ಡ ಮಗಳು ಹಾಗೂ ಅಳಿಯನಿಗೆ ಮನಸ್ತಾಪ ಉಂಟಾಗಿ, ಪತ್ನಿ ಸೌಧಾ ತವರು ಮನೆಯಲ್ಲೆ ಉಳಿದಿದ್ದಳು. ಜುಲೈ  8ರಂದು ಬೆಳಿಗ್ಗೆ ಮುಸ್ತಫಾ ಹಾಗೂ ಅವನ ತಾಯಿ  ಕಾರಿನಲ್ಲಿ ಕನ್ಯಾಡಿಯ ಕೈಕಂಬದಲ್ಲಿರುವ ಮಾವನ ಮನೆಗೆ ಬಂದಿದ್ದು, ಆ ಸಮಯ ನಾದಿನಿ ರೈಹಾನಳು  ಮನೆಯಲ್ಲಿ ಯಾರಿಗೂ ಹೇಳದೆ ಬ್ಯಾಗೊಂದನ್ನು  ಹಿಡಿದುಕೊಂಡು ಬಾವನ ಜತೆಗೆ ಕಾರು ಹತ್ತಿ ಹೊರಟು  ಹೋಗಿದ್ದಾಳೆ. ಘಟನೆಯ ಬಗ್ಗೆ ಆಕೆಯ ತಂದೆ ತನ್ನ ಕಿರಿಯ ಪುತ್ರಿ ಮನೆಗೆ ಬಾರದೇ ಕಾಣೆಯಾಗಿದ್ದಾಳೆ ಎಂದು ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Latest News

Related Posts