ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಬೆಳ್ತಂಗಡಿಯ ಸುವರ್ಣ ಪ್ರಿಂಟರ್ಸ್ ಮಾಲಕ ಗಣೇಶ್ ಸುವರ್ಣ ಹಾಗೂ ಸ್ಕೂಲ್ ಬುಕ್ ಕಂಪೆನಿ ಆಡಳಿತ ನಿರ್ದೇಶಕ ಮೋಹನ್ ದಾಸ್ ಭಂಡಾರಿ ಯವರ ಶೃದ್ಧಾಂಜಲಿ ಸಭೆಯು ಬೆಳ್ತಂಗಡಿ ಪ್ರಿಂಟರ್ಸ್ ಅಶೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಜೇಸಿಐ ಭವನದಲ್ಲಿ ಜುಲೈ ,7ರಂದು ಜರಗಿತು. ಪ್ರಿಂಟರ್ಸ್ ಅಶೋಸಿಯೇಷನ್ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ಧಾ, ಉಪಾಧ್ಯಕ್ಷ ಶೇಖರ್ ಟಿ. ನುಡಿನಮನ ಸಲ್ಲಿಸಿದರು. ಸಂಘದ ಕೋಶಾಧಿಕಾರಿ ಬಾಲಕೃಷ್ಣ, ಜತೆ ಕಾರ್ಯದರ್ಶಿ ನಾರಾಯಣ್ ಶೆಟ್ಟಿ, ನಿರ್ದೇಶಕರಾದ ಅನಿಲ್, ರಾಮಕೃಷ್ಣ, ಜೋಬಿನ್, ಸಾದಿಕ್, ಕಮಲಾಕ್ಷ, ಶರತ್ ಸುವರ್ಣ ಉಪಸ್ಥಿತರಿದ್ದರು.







