ದಯಾ ಶಾಲೆಯಲ್ಲಿ ಪಾಲಕರ ಸಭೆ

ದಯಾ ಶಾಲೆಯಲ್ಲಿ ಪಾಲಕರ ಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಲಾಯ್ಲದ ಸಹಸಂಸ್ಥೆಯಾದ ದಯಾ ವಿಶೇಷ ಮಕ್ಕಳ ಶಾಲೆಯಲ್ಲಿ ಪೋಷಕರ ಸಭೆಯು ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ವಿನೋದ್ ಮಸ್ಕರೇನ್ಹಸ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.‌ ಪೋಷಕರ ಪ್ರತಿನಿಧಿಯಾಗಿ ಎವ್ಚಿನ್ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ದಿವ್ಯಾ ಮಾತನಾಡಿ, ಶಾಲೆಯಲ್ಲಿ ಪ್ರಸ್ತುತ ಫಿಸಿಯೋಥೆರಫಿ ಮತ್ತು ವಾಕ್ ಹಾಗೂ ಶ್ರವಣ ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಸ್ಪಂದಿಸುವ ಬಗ್ಗೆ ಚರ್ಚಿಸಿದರು. ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಶಾಲೆಗೆ ಕರೆತರುವ ಬಗ್ಗೆ ಸೂಚಿಸಲಾಯಿತು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಈಗಾಗಲೇ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗಿದ್ದು, ಇತರ ಮಕ್ಕಳಿಗೂ ಅವಶ್ಯಕತೆ ಇದ್ದರೆ ಅವಕಾಶ ದೊರೆತಾಗ ತುರ್ತಾಗಿ ವ್ಯಾಕ್ಸಿನೇಷನ್ ಕೊಡಿಸಲಾಗುವುದು ಎಂದು ತಿಳಿಸಿದರು. ಮಾಸ್ಕ್ ಧಾರಣೆ ಬಗ್ಗೆ ಪ್ರಾತ್ಯಕ್ಷಿತೆ ನಡೆಸಿ ವಿವರಿಸಲಾಯಿತು.‌ ಮುಂದಿನ ದಿನಗಳಲ್ಲಿ ಇತರ ವೃದ್ಯಕೀಯ ತಪಾಸಣೆ ಹಾಗೂ ಮಕ್ಕಳಿಗೆ ಮತ್ತು ಪೋಷಕರಿಗೆ ಕೌನ್ಸಿಲಿಂಗ್ ನಡೆಸುವ ಬಗ್ಗೆ ವಿವರ ನೀಡಲಾಯಿತು.

Latest 5

Related Posts