ಬೆಳ್ತಂಗಡಿ: ‘ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್- KMJ, SYS, SSF, KCF ಇದರ ಸಹಾಯ್ ಉಪ್ಪಿನಂಗಡಿ ಸರ್ಕಲ್ ವ್ಯಾಪ್ತಿಯ ಬುಲೇರಿ ಸರಕಾರಿ ಪ್ರೌಢ ಶಾಲೆ, ಪ್ರಾಥಮಿಕ ಶಾಲೆ ಮತ್ತು ಇಳಂತಿಲ ಮುರ ಮಸೀದಿ, ಮದ್ರಸ ವಠಾರವನ್ನು ಸಹಾಯ್ ಕುಪ್ಪೆಟ್ಟಿ ವಿಂಗ್‌ನ ನೇತೃತ್ವದಲ್ಲಿ ಸ್ವಚ್ಚತೆ ಮಾಡಲಾಯಿತು ಪ್ರಾರ್ಥನೆ ಮೂಲಕ ಚಾಲನೆ ನೀಡಿ ಮಾತನಾಡಿದ ಅಬ್ದುಲ್ ಖಾದರ್ ಮದನಿ ಕನ್ಯಾರಕೋಡಿ, ಇಂತಹಾ ಸಂದಿಗ್ಧ ಸಂದರ್ಭದಲ್ಲಿ ಮಾದರಿ ಕಾರ್ಯಾಚರಣೆ ಮಾಡುವ ಮೂಲಕ ಇತರ ಸಂಘಟನೆಗಳಿಗೆ ಮಾದರೀಯಾಗಬೇಕು. ಅಲ್ಲಾಹು ಮಾತ್ರವಲ್ಲ, ಎಲ್ಲಾ ಮನುಷ್ಯರು ಮೆಚ್ಚುವಂತಹಾ ಸತ್ಕಾರ್ಯವಾಗಿದೆ ಎಂದರು.ಕರ್ನಾಟಕ ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಕೋಶಾಧಿಕಾರಿ ಇಬ್ರಾಹಿಂ NNB ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಹು ಸಮದ್ ಸಖಾಫಿ ಮುರ, ಕೊರೊನೋ ಸಂದರ್ಭದಲ್ಲಿ ಆರಂಭಗೊಂಡ ಸಹಾಯ್ ತಂಡವು ರಾಜ್ಯದಾದ್ಯಂತ ಸರ್ಕಾರದ ನಿಯಮಗಳನ್ನು ಪಾಲಿಸಿ, ಜಾತಿ ಧರ್ಮ ಭಾಷೆ ವ್ಯತ್ಯಾಸವಿಲ್ಲದೆ; ಅಂತ್ಯಕ್ರಿಯೆ, ರೋಗಿಗಳ ಶುಶ್ರೂಷೆ, ಆಂಬ್ಯುಲೆನ್ಸ್ ಸೇವೆ, ಸ್ಯಾನಿಟೈಸರ್ ಸಿಂಪಡಣೆ, ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ನಿರ್ಮಲ ಮನಸ್ಸು-ನೈರ್ಮಲ್ಯ ಪರಿಸರ ಎಂಬ ಘೋಷಣೆಯೊಂದಿಗೆ, ಶಾಲೆ, ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಬಸ್ ತಂಗುದಾಣ, ಸಾರ್ವಜನಿಕ ಸ್ಥಳಗಳು, ಪರಿಸರ ಸ್ವಚ್ಛತಾ ಕಾರ್ಯಕ್ರಮ ಮೊದಲಾದ ಕಾರ್ಯಾಚರಣೆ ಯೊಂದಿಗೆ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಮಾತನಾಡಿ ಸಹಾಯ್ ತಂಡದ ಸೇವೆಯು ನಮ್ಮ ಶಾಲೆಗೆ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತಾ ಅಭಿಯಾನ ಇಂತಹ ಕಾರ್ಯಕ್ರಮಗಳು ಮಾಡುತ್ತಿರುವುದು ಜನರು ಹಾಗೂ ದೇವರು ಮೆಚ್ಚುವಂಥದ್ದು. ವಿದ್ಯಾರ್ಥಿ ರಕ್ಷಕರು ಕೂಡಾ ಇಂತಹಾ ಸತ್ಕಾರ್ಯಗಳಲ್ಲಿ ಕೈ ಜೋಡಿಸಬೇಕೆಂದು ಕರೆ ನೀಡುತ್ತಾ, ಕೃತಜ್ಞತೆ ಸಲ್ಲಿಸಿದರು. ಇಳಂತಿಲ ಗ್ರಾಮ ಪಂಚಾಯತ್ ಸದಸ್ಯರೂ, ಕರ್ನಾಟಕ ಮುಸ್ಲಿಂ ಜಮಾಅತ್ ಇಳಂತಿಲ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಯಾದ ಸಿದ್ದೀಕ್ ಇಂಜಿನಿಯರ್ ಇಳಂತಿಲ ಸ್ವಾಗತ ಭಾಷಣ ಮಾಡಿದರು.ಸಹಾಯ್ ಉಪ್ಪಿನಂಗಡಿ ಸರ್ಕಲ್ ಉಸ್ತುವಾರಿ NM ಶರೀಫ್ ಸಖಾಫಿ ನೆಕ್ಕಿಲ್, ಸಹಾಯ್ ನಾಯಕರೂ, SYS ಸರಳೀಕಟ್ಟೆ ಸೆಂಟರ್ ಅಧ್ಯಕ್ಷರಾದ ಬಹು GM ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಇಸ್ಮಾಯಿಲ್ ಮುರ, ಸಮಾಜ ಸೇವಕರಾದ ಸುಲೈಮಾನ್ ಕರಾಯ, ಅಬ್ದುಲ್ ಲತೀಫ್ ಕನ್ಯಾರಕೋಡಿ, ಶರೀಫ್ NNB ಮುರ, ನಾಸಿರ್ ಪದ್ಮುಂಜ, ಸ್ಥಳೀಯ SYS, SSF, KMJ ನಾಯಕರು, ಇಳಂತಿಲ ಮುರ ಶಾಖೆ ಹಾಗೂ ಕುಪ್ಪೆಟ್ಟಿ ಸೆಕ್ಟರ್ ವ್ಯಾಪ್ತಿಯ SYS SSF ಸಹಾಯ್, ಇಸಾಬ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.






