ಕೊರೋನಾದಿಂದ ಮೃತಪಟ್ಟವರ ಕುಟುಂಬಿಕರಿಗೆ ನೆರವು

ಕೊರೋನಾದಿಂದ ಮೃತಪಟ್ಟವರ ಕುಟುಂಬಿಕರಿಗೆ ನೆರವು
Facebook
Twitter
LinkedIn
WhatsApp

ಬೆಳ್ತಂಗಡಿ: ರಾಜ್ಯ ಸರಕಾರ ಕೊರೋನಾದಿಂದ ಮೃತರಾದ ಬಿಪಿಎಲ್ ಪಡಿತರ ಚೀಟಿ ಹೊಂದಿದವರ ಕುಟುಂಬಿಕರಿಗೆ 1ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು,ಈ ಯೋಜನೆಯ ಬಗ್ಗೆ ಸಂಬಂಧಿತ ಮನೆಗಳಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ದಾನಿಗಳ ಸಹಕಾರದಿಂದ ಸಂಗ್ರಹಿಸಿದ ಸಹಾಯಧನವನ್ನು ಸಂತ್ರಸ್ತ ಕುಟುಂಬಿಕರಿಗೆ ತಲಾ 10,000 ರೂಪಾಯಿಯಂತೆ ವಿತರಿಸಿ, ಅವರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಕ್ಷೇತ್ರದ ಶಾಸಕನಾಗಿ ಮಾಡುತ್ತಿದ್ದೇನೆ. ಸರಕಾರದ ಪರಿಹಾರಧನ ಪಡೆಯಲು ಸಂಗ್ರಹಿಸಬೇಕಾದ ದಾಖಲೆಗಳ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರೊಡಗೂಡಿ ಸಂಬಂಧಿಸಿದ ಮನೆಗಳಿಗೆ ತೆರಳಲಾಗುವುದು ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜುಲೈ 12ರಂದು ನಾರಾವಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಿಕರಿಗೆ ಬೆಳ್ತಂಗಡಿ ಮಂಡಲ ಬಿಜೆಪಿ ಮತ್ತು ಶಾಸಕರ ವತಿಯಿಂದ ನೀಡಲಾಗುವ ತಲಾ 10,000/- ರೂಪಾಯಿ ಸಹಾಯಧನವನ್ನು ವಿತರಿಸಿ ಮಾತನಾಡುತ್ತಿದ್ದರು. ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷ ಉದಯ ಹೆಗ್ಡೆ, ಸದಸ್ಯರಾದ ರಾಜವರ್ಮ ಜೈನ್, ಸಂತೋಷ್ ಮರ್ದೊಟ್ಟು, ಮೀನಾ, ನಾರಾಯಣ ಪೂಜಾರಿ, ಸುದರ್ಶನ್ ಹೆಗ್ಡೆ; ಮರೋಡಿ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಬುಣ್ಣಾನ್, ನಾರಾವಿ ಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ಆಚಾರ್ಯ, ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಕಾರ್ಯದರ್ಶಿ ಅಭಿಜಿತ್ ಜೈನ್, ಅಂಡಿಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಅಂಡಿಂಜೆ, ಕುತ್ಲೂರು ಶಕ್ತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ ಭಟ್ ಮತ್ತಿತರರು ಶಾಸಕರ ಜೊತೆಗಿದ್ದರು.ನಾರಾವಿ ಗ್ರಾಮದ ಅರಸಿಕಟ್ಟೆ ನಿವಾಸಿ ವಸುಧಾ ಪ್ರಭು ಹಾಗೂ ಬಾಂದೊಟ್ಟು ಪ್ರತಿಭಾ; ಕುತ್ಲೂರು ಗ್ರಾಮದ ಪುರುಷಗುಡ್ಡೆ ಮನೆಯ ಕರಿಯದು, ಬೋವಾಡಿ ನಿವಾಸಿ ಡೈಸಿ ಹಾಗೂ ಎ.ಜೆ. ಫಾರ್ಮ್‌ಹೌಸ್‌ನ ಮರಿಯಮ್ಮ ಜೇಮ್ಸ್‌ರ ಕುಟುಂಬಿರಿಗೆ ತಲಾ 10,000/- ರೂಪಾಯಿಗಳ ನೆರವು ಹಸ್ತಾಂತರಿಸಲಾಯಿತು.

Latest 5

Related Posts