ಆನ್‌ಲೈನ್‌ನಲ್ಲಿ ಗಮಕ ಹಬ್ಬ

ಆನ್‌ಲೈನ್‌ನಲ್ಲಿ ಗಮಕ ಹಬ್ಬ
Facebook
Twitter
LinkedIn
WhatsApp

ಬೆಳ್ತಂಗಡಿ: ಗೇರುಕಟ್ಟೆ ವಿಷ್ಣುಪದ್ಮ ನಿವಾಸದಲ್ಲಿ  ಜುಲೈ 12ರಂದು ಆನ್‌ಲೈನ್  ಗಮಕ ಹಬ್ಬದ ಮೊದಲ ಕಾರ್ಯಕ್ರಮ ನಡೆಯಿತು .  ಕುಮಾರವ್ಯಾಸ ನಮನ ಮತ್ತು  ಹಾಗೂ ವಿದುರ ಭಕ್ತಿ ಗಮಕವಾಚನ-ವ್ಯಾಖ್ಯಾನ ಕಾರ್ಯಕ್ರಮಕ್ಕೆ  ಬೆಳ್ತಂಗಡಿ ತಾಲೂಕು ಗಮಕ ಕಲಾ  ಪರಿಷತ್ ಅಧ್ಯಕ್ಷ ಜಯರಾಮ ಕುದ್ರೆಂತಾಯರು ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಖ್ಯಾತ ಸಾಹಿತಿ ಪ‌ ರಾಮಕೃಷ್ಣ ಶಾಸ್ತ್ರಿ ಕುಮಾರವ್ಯಾಸ ನಮನ ಸಲ್ಲಿಸಿ ಆನ್‌ಲೈನ್ ಕಾರ್ಯಕ್ರಮದ ಹೊಸ ಯೋಚನೆ ಹಾಗೂ  ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ  ದಕ್ಷಿಣ ಕನ್ನಡ ಜಿಲ್ಲಾ  ಗಮಕ ಕಲಾ ಪರಿಷತ್    ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಮಾತನಾಡಿ, ತಾಲೂಕು ಘಟಕದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿ ಉಳಿದ ತಾಲೂಕು ಘಟಕಗಳ ಪಾಲ್ಗೊಳ್ಳುವಿಕೆ ಮತ್ತು ಪ್ರೋತ್ಸಾಹವನ್ನು ಕೋರಿದರು.    ಸುವರ್ಣಕುಮಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯದರ್ಶಿ ರಾಮಕೃಷ್ಣ ಭಟ್ ಬಳಂಜ ಸ್ವಾಗತಿಸಿ, ಕಾರ್ಯಕ್ರಮ ಆಯೋಜಿಸಿದ್ದರು.                  ಕುಮಾರವ್ಯಾಸನ ಕರ್ನಾಟಕ ಕಥಾಮಂಜರಿ ಕಾವ್ಯದಿಂದ ಆಯ್ದ ವಿದುರ ಭಕ್ತಿಯ ಭಾಗವನ್ನು  ಈ ಬಾರಿ ಗಮಕ ಪಾರೀಣ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷರಾದ ಗಂಗಮ್ಮ ಕೇಶವಮೂರ್ತಿ ಹಾಗು  ಮಧೂರು ಮೋಹನ ಕಲ್ಲೂರಾಯರ ಶಿಷ್ಯೆ ಮೇಧಾ ಕೆ. ಅವರು ತಮ್ಮ ಸುಶ್ರಾವ್ಯ ಕಂಠದಿಂದ  ವಾಚನಗೈದು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಮಧೂರು ಮೋಹನ ಕಲ್ಲೂರಾಯರು  ಭಕ್ತಿಪೂರ್ವಕ ವ್ಯಾಖ್ಯಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮೊದಲ ಆನ್‌ಲೈನ್ ಕಾರ್ಯಕ್ರಮದ  ತಾಂತ್ರಿಕ ಅಡಚಣೆಗಾಗಿ  ವಿಷಾಧ ವ್ಯಕ್ತಪಡಿಸಿ ಮುಂದೆ ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸಿಕೊಡಲು ಈ ಬಳಗದ ಕಲಾವಿದರು ಆಸಕ್ತಿ ತೋರಿ, ಪ್ರೋತ್ಸಾಹಿಸಿ, ವಾಚನ-ವ್ಯಾಖ್ಯಾನ  ಕಾರ್ಯಕ್ರಮವನ್ನು ಹಬ್ಬವಾಗಿಸಲು  ವಿನಂತಿಸಿಕೊಳ್ಳಲಾಯಿತು.  ಕಾರ್ಯದರ್ಶಿ ರಾಮಕೃಷ್ಣ ಭಟ್ ಬಳಂಜ ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಬೇರುಗಳು, ವಾಟ್ಸ್ – ಅಪ್ ಗ್ರೂಪ್ ಸದಸ್ಯರು ಹಾಗೂ ಪ್ರಾಯೋಜಕತ್ವ ವಹಿಸಿದ  ವಿಷ್ಣುಪದ್ಮ ಮನೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Latest 5

Related Posts