ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ 11 ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು ಕರ್ನಾಟಕ ರಾಜ್ಯ ಸಂಸ್ಥೆ ಆಯೋಜಿಸಿದ್ದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜ್ಯ ಪುರಸ್ಕಾರ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರ ಸಂಸ್ಥೆ ಆಯೋಜಿಸಿದ ಗೋಲ್ಡನ್ ಆ್ಯರೊ ರಾಷ್ಟ್ರ ಪುರಸ್ಕಾರ ಪಡೆದ ನಾಲ್ಕು ವಿದ್ಯಾರ್ಥಿಗಳು; ಹಾಗೂ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಪಡೆದು ಬೆಳ್ತಂಗಡಿ ತಾಲೂಕಿಗೆ ಹೆಮ್ಮ ಎನಿಸಿಕೊಂಡ ನಾಲ್ವರು ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಹರೀಶ್ ಪೂಂಜ ತಮ್ಮ ಶ್ರಮಿಕ ಕಚೇರಿಯಲ್ಲಿ ಜುಲೈ 12ರಂದು ಸನ್ಮಾನಿಸಿ ಗೌರವಿಸಿದರು. ಇವರ ಜತೆಗೆ ಸಾಧನೆಗೆ ಸಂಪೂರ್ಣ ಶ್ರಮವಹಿಸಿದ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಿದರು.ಸ್ಥಳೀಯ ಸಂಸ್ಥೆಯ ಅಧ್ಯಕ್ಷ ವಿಠಲ ಶೆಟ್ಟಿ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಹಾಗೂ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ಸ್ ಕ್ಯಾಪ್ಟನ್ ಪ್ರಮೀಳಾ, ಸೈಂಟ್ ಮೇರಿಸ್ ಸ್ಕೌಟ್ಸ್ ಗೈಡ್ಸ್ ಶಿಕ್ಷಕ ಅಜಿತ್ ಕುಮಾರ್ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.






