ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳದಂಗಡಿ ವಲಯದ ಸುಲ್ಕೇರಿಮೊಗ್ರು ಒಕ್ಕೂಟದಲ್ಲಿನ ಎ ಮತ್ತು ಬಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಲಾಭಾಂಶ ವಿತರಣೆ ಜುಲೈ 14ರಂದು ಸುಲ್ಕೇರಿ ಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು ಸದಸ್ಯರಿಗೆ ಲಾಭಾಂಶದ ಚೆಕ್‍ನ್ನು ವಿತರಸಿ ಶುಭ ಹಾರೈಸಿದರು. ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಯೋಜನೆಯ ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ಯಶವಂತ ಎಸ್., ಒಕ್ಕೂಟದ ಅಧ್ಯಕ್ಷ ಆನಂದ, ಶಕುಂತಳಾ, ಕೋಶಾಧಿಕಾರಿ ಪ್ರೇಮಾ, ವಲಯ ಮೇಲ್ವಿಚಾರಕಿ ಮಲ್ಲಿಕಾ, ಸೇವಾ ಪ್ರತಿನಿಧಿ ಸುಲೋಚನ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.






