ಮುಂಡಾಜೆ ಹೆಲ್ಪ್‌ಲೈನ್ ನಿಂದ ಮುಂಡಾಜೆ ಉಭಯ ಮಸೀದಿಗಳಿಗೆ “ಮಯ್ಯತ್‌ಟೆಂಟ್” ಕೊಡುಗೆ

ಮುಂಡಾಜೆ ಹೆಲ್ಪ್‌ಲೈನ್ ನಿಂದ ಮುಂಡಾಜೆ ಉಭಯ ಮಸೀದಿಗಳಿಗೆ “ಮಯ್ಯತ್‌ಟೆಂಟ್” ಕೊಡುಗೆ
Facebook
Twitter
LinkedIn
WhatsApp

ಬೆಳ್ತಂಗಡಿ: ಕಳೆದ ಒಂದೂವರೆ ವರ್ಷದ ಹಿಂದೆ ಮುಂಡಾಜೆಯಲ್ಲಿ ಆರಂಭವಾಗಿರುವ ಹೆಲ್ಪ್‌ಲೈನ್ ಮುಂಡಾಜೆ ವಾಟ್ಸ್‌ಆಪ್ ಗ್ರೂಪ್ ಮೂಲಕ ಮುಂಡಾಜೆ ಗ್ರಾಮದ ಉಭಯ ಮಸೀದಿಗಳಿಗೆ 60 ಸಾವಿರ ರೂಪಾಯಿ ಮೌಲ್ಯದ ಮಯ್ಯತ್ ಟೆಂಟ್ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.ಜುಲೈ 21ರಂದು ಬಕ್ರೀದ್ ಹಬ್ಬದ ಸಂಭ್ರಮದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಅವರು ಹೆಲ್ಪ್‌ಲೈನ್ ಪರವಾಗಿ ಈ ಕೊಡುಗೆಯನ್ನು ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಅಬ್ಬಾಸ್ ಕೆ. ಎಮ್‌. ಮತ್ತು ಕೋಶಾಧಿಕಾರಿ ಹಂಝ ಬಿ.ಎಮ್‌.ಎ. ಹಾಗೂ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್‌ನಲ್ಲಿ ಖತೀಬ್ ಇಬ್ರಾಹಿಂ ಸಖಾಫಿ ಕಬಕ ಅವರು ಸಮಿತಿ ಅಧ್ಯಕ್ಷ ಕರೀಮ್ ಕೆ. ಎಸ್‌. ಮತ್ತು ಕಾರ್ಯದರ್ಶಿ ಶಬೀರ್ ಹಾಗೂ ಪದಾಧಿಕಾರಿಗಳಿಗೆ ಕೊಡುಗೆ ಹಸ್ತಾಂತರಿಸಿದರು. ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಹಾಜರಿದ್ದರು.ಈ ಕೊಡುಗೆಯ ಪೈಕಿ ಒಂದು ಟೆಂಟಿನ ಎಲ್ಲಾ ಮೊತ್ತವನ್ನು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಹಿರಿಯ ಚಾಲಕ ಇಬ್ರಾಹಿಂ ಅವರ ಹೆಸರಿನಲ್ಲಿ ಅವರ ಸಹೋದರ ಇಸ್‌ಹಾಕ್ ಅವರ ಮುತುವರ್ಜಿಯಿಂದ ಅವರ ಮಕ್ಕಳು ಸಮರ್ಪಿಸಿದರೆ, ಇನ್ನೊಂದಕ್ಕೆ ಜಂಟಿ ಜಮಾಅತ್‌ನ ದಾನಿಗಳು ನೆರವು ನೀಡಿದ್ದಾರೆ. ಕೊಡುಗೆ ಹಸ್ತಾಂತರ ಸಂದರ್ಭ ಗ್ರೂಪ್ ಎಡ್ಮಿನ್ ಗಳು ಭಾಗವಹಿಸಿದ್ದರು.ಮೇಟ್: ಈ ಟೆಂಟ್ ಸ್ಥಳದಲ್ಲೇ ಜೋಡಿಸುವ ವಿನ್ಯಾಸದ್ದಾಗಿದ್ದು, ಜಮಾಅತ್ ಗಳಲ್ಲಿ ಯಾರಾದರೂ ಮರಣ ಹೊಂದಿದರೆ ಧಾರ್ಮಿಕ ವಿಧಿಯಂತೆ ಅವರ ದೇಹ ಸ್ನಾನ ಮಾಡಿಸಲು ಅನುಕೂಲವಾಗುವಂತೆ ಅದರ‌ ರಚನೆ ಹೊಂದಿದೆ.

Latest 5

Related Posts