ಬೆಳ್ತಂಗಡಿ: ಉಜಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸರಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಮೂರು ದಿನಗಳ ಕಾಲ ಶ್ರೀ ಶಾರದಾ ಮಂಟಪದಲ್ಲಿ ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ನಡೆಸಲು ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಅರವಿಂ ದ ಕಾರಂತ ಹೇಳಿದ್ದಾರೆ ಅವರು ಜುಲೈ 24ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಪ್ರಕಟಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ವಿಜಯರಾಘವ ಪಡ್ವೆಟ್ನಾಯರ ಅನುಪಸ್ಥಿತಿಯಲ್ಲಿ ಶರತ್‌ಕೃಷ್ಣ ಪಡ್ವೆಟ್ನಾಯರು ಉಪಸ್ಥಿತರಿದ್ದು, ಶ್ರೀ ಗಣೇಶೋತ್ಸವ ಆಚರಣೆಯ ಕುರಿತು ಸಲಹೆಸೂಚನೆಗಳನ್ನು ನೀಡಿ, ಈ ಬಾರಿಯೂ ಶ್ರೀ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಬೇಕೆಂದು ತಿಳಿಸಿದರು. ಸಮಿತಿ ಅಧ್ಯಕ್ಷ ಅರವಿಂದ ಕಾರಂತ್ ಸ್ವಾಗತಿಸಿ,ಗಣೇಶೋತ್ಸವ ಆಚರಣೆಗೆ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ಚೇತನ್ ಸಾಲ್ಯಾನ್, ಕೋಶಾಧಿಕಾರಿ ಗಣೇಶ್ ರೆಂಜಾಳ, ನಿಕಟಪೂರ್ವ ಅಧ್ಯಕ್ಷ ದೇವಪ್ಪ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸುವರ್ಣ ವರ್ಷದ 51ನೇ ಅಧ್ಯಕ್ಷರಾಗಿ ಗೌರವದ ಚುಕ್ಕಾಣಿ ಹಿಡಿದ ಶರತ್‌ಕೃಷ್ಣ ಪಡ್ವೆಟ್ನಾಯರನ್ನು ಸಮಿತಿ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ., ಭರತ್ ಕುಮಾರ್, ಪ್ರಕಾಶ್ ಗೌಡ ಅಪ್ರಮೇಯ, ಕೇಶವ ಭಟ್ ಅತ್ತಾಜೆ, ರಾಮಚಂದ್ರ ಶೆಟ್ಟಿ, ಸಂಜೀವ ಕೆ., ಸಂದೇಶ್ ಶೆಟ್ಟಿ ಕುಂಜರ್ಪ, ಸಂತೋಷ್ ಅತ್ತಾಜೆ, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಮ್ಯಾ ಫ್ಯಾನ್ಸಿಯ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಗೋಪಾಲಕೃಷ್ಣ ಪ್ರಸ್ತಾವಿಸಿ, ಚೇತನ್ ಸಾಲ್ಯಾನ್ ವಂದಿಸಿದರು.






