ಬೆಳಾಲಿನಲ್ಲಿ ಕೋವಿಡ್ ಸಹಾಯಹಸ್ತ ಕಾರ್ಯಕ್ರಮ ಮಾಹಿತಿ

ಬೆಳಾಲಿನಲ್ಲಿ ಕೋವಿಡ್ ಸಹಾಯಹಸ್ತ ಕಾರ್ಯಕ್ರಮ ಮಾಹಿತಿ
Facebook
Twitter
LinkedIn
WhatsApp

ಬೆಳ್ತಂಗಡಿ: ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಬೆಳಾಲು ಗ್ರಾಮ ಸಮಿತಿಯ ಸಭೆ ಹಾಗೂ ಕೋವಿಡ್ ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮವು ಆಗಸ್ಟ್ 2ರಂದು ಬೆಳಾಲು ಮೈತ್ರಿ ಯುವಕ ಮಂಡಲದಲ್ಲಿ ನಡೆಯಿತು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ರವರ ನಿರ್ದೇಶನದಂತೆ ಪ್ರತೀ ಗ್ರಾಮ ಮಟ್ಟದಲ್ಲೂ ಕೋವಿಡ್ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಅನುಷ್ಠಾನ ಮಾಡಿದ್ದು, ಅದರ ಮಾಹಿತಿಯನ್ನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಂಜನ್ ಜಿ. ಗೌಡರವರು ಸಭೆಗೆ ನೀಡಿದರು. ಈ ಸಭೆಯಲ್ಲಿ ಕೊರೊನದಿಂದ ಪಾಸಿಟಿವ್ ಹಾಗೂ ಮೃತರ ಕುಟುಂಬಗಳಿಗೆ ಬೂತ್ ಸಮಿತಿ ಯ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಗೌಡ, ಪ್ರಧಾನ ಕಾರ್ಯದರ್ಶಿಯಾದ ದಯಾನಂದ ಪಿ. ಬೆಳಾಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ವಿಜಯ್, ಕಿಸಾನ್ ಕಾಂಗ್ರೆಸ್ ಘಟಕ ಅಧ್ಯಕ್ಷ ದಿನೇಶ್ ಕೋಟ್ಯಾನ್, ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಗೌಡ, ಕಾರ್ಯದರ್ಶಿ ಅದಂ, ಹಿಂದುಳಿದ ವರ್ಗ ಕಾಂಗ್ರೆಸ್ ಘಟಕ ಪ್ರಧಾನ ಕಾರ್ಯದರ್ಶಿ ಆಶೋಕ ಆಚಾರ್ಯ ಪಂಚಾಯತ್ ಸದಸ್ಯ ಜಯಂತ್ ಗೌಡ ಬೆಳಾಲು, ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಯೋಗಿಶ್ ಗೌಡ,ವ್ಯವಸಾಯ ಸೇವಾ ಸಂಘ ನಿರ್ದೇಶಕರಾದ ವಿಜಯ್ ಗೌಡ ಹಾಗೂ ಎಲ್ಯಣ್ಣ ನಾಯ್ಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಾಬು ಗೌಡ, ಬೂತ್ ಕಮಿಟಿಯ ಹಿರಿಯರಾದ ಗೋವಿಂದ ಗೌಡ ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Latest 5

Related Posts