ಕೊಕ್ರಾಡಿಯಲ್ಲಿ ‘ಆಷಾಡ ಮಾಸದಲ್ಲಿ ಒಂದು ದಿನ’

ಕೊಕ್ರಾಡಿಯಲ್ಲಿ ‘ಆಷಾಡ ಮಾಸದಲ್ಲಿ ಒಂದು ದಿನ’
Facebook
Twitter
LinkedIn
WhatsApp

ಬೆಳ್ತಂಗಡಿ: ಶ್ರೀ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿಯ ನಾರಾವಿ ವಲಯದ ಕೊಕ್ರಾಡಿ ಹಾಗೂ ಸಾವ್ಯ ಕಾರ್ಯಕ್ಷೇತ್ರದ ಬನಶಂಕರಿ ಹಾಗೂ ನಿಸರ್ಗ ಜ್ಞಾನವಿಕಾಸ ಕೇಂದ್ರದ ‘ಆಷಾಢ ಮಾಸದಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ಕೊಕ್ರಾಡಿ ಶಾರದಾಂಭಾ ಯುವಕ ಮಂಡಲದಲ್ಲಿ ಮರದ ಕಳ ಸೆಗೆ ಭತ್ತ ತುಂಬಿಸುವ ಮೂಲಕ ವೇದಿಕೆಯಲ್ಲಿರುವ ಗಣ್ಯರು ಉದ್ಘಾಟಿಸಿದರು.ತಾಲೂಕಿನ ಯೋಜನಾಧಿಕಾರಿ ಯಶವಂತ ಯಸ್.  ಪ್ರಸ್ತಾವಿಸಿ, ಹಿಂದಿನ ಕಾಲದಲ್ಲಿ ಹಿರಿಯರು ಆಷಾಢ ಮಾಸದಲ್ಲಿ ಅರೋಗ್ಯವರ್ಧಕ ಆಹಾರ ಪದ್ಧತಿಗಳನ್ನು ಅನುಸ ರಿಸುತಿದ್ದು ಇದನ್ನು ಮುಂದಿನ ಯುವಪೀಳಿಗೆಗೆ ಇಂದಿನ ಮಹಿಳೆಯರು ವರ್ಗಾಯಿಸ ಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ  ಹಿಂದಿನ ಕಾಲದವರು ಆಷಾಢ ಮಾಸದಲ್ಲಿ ತಯಾರಿಸುತಿದ್ದ ಆಹಾರ ಪದ್ಧತಿಗಳು ನಶಿಸಿ ಹೋಗಬಹುದು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ  ಮೂಡಬಿದ್ರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ  ಡಾl ನಯನ ಯಸ್. ಪೈ, ಕೆಸುವಿನ  ಪತ್ರೊಡೆ ಶರೀರದಲ್ಲಿನ ಕಲ್ಮಶ ಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ತಗಚೆ ಸೊಪ್ಪು ರೋಗ ನಿರೋಧಕ ಶಕ್ತಿ ಹಾಗೂ ಚರ್ಮಕ್ಕೆ ಸಂಬಂಧ ಪಟ್ಟ ರೋಗಕ್ಕೆ ರಾಮಬಾಣ. ಆಷಾಢ ಅಮಾವಾಸ್ಯೆಯ ದಿನ  ಹಾಲೇಮರದ ಕಷಾಯ ಕುಡಿಯುವುದರಿಂದ ಲಿವರ್ ಸಮಸ್ಯೆ ಬರುವುದಿಲ್ಲ; ಹಾಗೂ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧ್ಯವಯಸ್ಕರು ಆಹಾರದಲ್ಲಿ ರಾಗಿ, ದಾನ್ಯ, ನುಗ್ಗೆ, ಖನಿಜಾಂಶವಿರುವ ಆಹಾರಗಳನ್ನು ಸೇವಿಸಬೇಕು ಎಂದರುಆಂಡಿಂಜೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಒಕ್ಕೂಟ ಅಧ್ಯಕ್ಷ  ಬಾಲಕೃಷ್ಣ, ಆಶಾಕಾರ್ಯಕರ್ತೆ ಸೀಮಂತಿನಿ, ಪಂಚಾಯತ್ ಸದಸ್ಯೆ ಸರೋಜ, ಕೋಶಾಧಿಕಾರಿ ಹರೀಶ್ ಶೆಟ್ಟಿ, ಕೇಂದ್ರಗಳ ಸಂಯೋಜಕಿಯರಾದ  ಪ್ರೇಮಲತಾ, ಶಕುಂತಲಾ  ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಹರಿಣಿ ಜಗದೀಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ  ಸೇವಾಪ್ರತಿನಿಧಿ ಶಶಿಧರ್ ಕೆ. ಕುಲಾಲ್ ಸ್ವಾಗತಿಸಿ, ನಿಸರ್ಗ ಕೇಂದ್ರದ ಮಾಜಿ ಸಂಯೋಜಕಿ ಯಮುನಾ ಧನ್ಯವಾದವಿತ್ತರು.

Latest 5

Related Posts