ಮುಂಡಾಜೆ ರೋಟರಿ ಸಮುದಾಯದಳ ಪದಗ್ರಹಣ

ಮುಂಡಾಜೆ ರೋಟರಿ ಸಮುದಾಯದಳ ಪದಗ್ರಹಣ
Facebook
Twitter
LinkedIn
WhatsApp

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಮುಂಡಾಜೆ ರೋಟರಿ ಸಮುದಾಯ ದಳದ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಮುಂಡಾಜೆ  ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸೇವೆಯಲ್ಲಿ ತೊಡಗಿದವರಿಗೆ ಸವಾಲುಗಳಿವೆ. ಸವಾಲುಗಳನ್ನು ಎದುರಿಸಿ ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಸಂಘ-ಸಂಸ್ಥೆಗಳು ಗೌರವಕ್ಕೆ ಅರ್ಹವಾಗಿರುತ್ತವೆ ಎಂದು ಹೇಳಿದರು.ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕರ್, ನಿಕಟಪೂರ್ವ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ನಿರ್ದೇಶಕ ಕಜೆ ವೆಂಕಟೇಶ್ವರ ಭಟ್, ಆರ್ ಸಿಸಿ ಅಧ್ಯಕ್ಷ ಪಿ. ಸಿ. ಸೆಬಾಸ್ಟಿಯನ್, ನಿಕಟಪೂರ್ವ ಕಾರ್ಯದರ್ಶಿ ವಿಘ್ನೇಶ್ ಪ್ರಭು ಉಪಸ್ಥಿತರಿದ್ದರು.ಕೋವಿಡ್ ಸಂದರ್ಭ ವಿಶೇಷ ಕರ್ತವ್ಯ ನಿರ್ವಹಿಸಿದ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಕಾವ್ಯಾ ವೈಪನಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಾ ಎ. ಎಸ್., ಕೋವಿಡ್ ವಾರಿಯರ್ ಆಗಿ ಸ್ವಯಂ ಪ್ರೇರಣೆಯಿಂದ ದುಡಿದ ರಮೇಶ್, ಸಮಾಜಸೇವಕ ಗುರುರಾಜ ಪ್ರಭು ಅವರನ್ನು ಗೌರವಿಸಲಾಯಿತು.ಆರ್‌ಸಿಸಿಯ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಹರಿಪ್ರಸಾದ್ ಭಟ್ ವಂದಿಸಿದರು.ಅವನಿ ಹೆಬ್ಬಾರ್ ಹಾಗೂ ಗೋಪಾಲಕೃಷ್ಣ ಜೋಷಿ ಕಾರ್ಯಕ್ರಮ ನಿರೂಪಿಸಿದರು.

Latest 5

Related Posts