ಮೇಲಂತ ಬೆಟ್ಟು ಸರಕಾರಿ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

ಮೇಲಂತ ಬೆಟ್ಟು ಸರಕಾರಿ  ಕಾಲೇಜಿಗೆ ಕಂಪ್ಯೂಟರ್ ಕೊಡುಗೆ
Facebook
Twitter
LinkedIn
WhatsApp

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಮಡಂತ್ಯಾರು, ರೋಟರಿ ಕ್ಲಬ್ ಮಂಗಳೂರು ಮಿಡ್‌ಟೌನ್, ರೋಟರಿ ಕ್ಲಬ್ ಮಂಗಳೂರು ಡೌನ್‌ಟೌನ್, ರೋಟರಿ ಕ್ಲಬ್ ಮಂಗಳೂರು ಸೀ ಸೈಡ್ ಹಾಗೂ ಪ್ರಖ್ಯಾತ ಕೋಗ್ನಿಸೆಂಟ್ ಕಂಪೆನಿ ಇವುಗಳ ಪ್ರಾಯೋಜಕತ್ವದಲ್ಲಿ ರೋಟರಿ ಜಿಲ್ಲೆ 3181ರ 2022-23 ನೇ ಸಾಲಿನ ನೀಯೋಜಿತ ಗವರ್ನರ್ ಎಚ್. ಆರ್. ಕೇಶವ್ ಅವರ ನೇತೃತ್ವದಲ್ಲಿ , ರೋಟರಿ ಸಹಕಾರಿತ ಯೋಜನೆಯಡಿಯಲ್ಲಿ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟುಗೆ ರೂಪಾಯಿ 4,50,000ಮೌಲ್ಯದ 15 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ಕೊಡಲಾಯಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷರಾದ ಬಿ. ಕೆ. ಧನಂಜಯರಾವ್, ಕಾರ್ಯದರ್ಶಿ ಶ್ರೀಧರ ಕೆ. ವಿ., ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿ ಅಬೂಬಕ್ಕರ್, ಶ್ರೀಕಾಂತ ಕಾಮತ್, ಡಾl ಶಶಿಧರ ಡೋಂಗ್ರೆ, ರಕ್ಷಾ ರಾಘ್ನೇಶ್ ರೋಟರಿ ಕ್ಲಬ್ ಮಂಗಳೂರು ಡೌನ್‌ಟೌನ್‌ನ ಪೂರ್ವಾಧ್ಯಕ್ಷರಾದ ಸೂರಜ್ ಹೆಬ್ಬಾರ್, ರೋಟರಿ ಕ್ಲಬ್ ಮಿಡ್‌ಟೌನ್‌ನ ಪೂರ್ವಾಧ್ಯಕ್ಷರಾದ ರಾಧಾಕೃಷ್ಣ ಹೆಬ್ಬಾರ್, ಸುರೇಶ್ ಕುಂದರ್, ರಾಜ್ ಮೋಹನ್ ಭಂಡಾರಿ, ರೋಟರಿ ಕ್ಲಬ್ ಸೀ ಸೈಡ್‌ನ ಅಧ್ಯಕ್ಷರಾದ ಅಶೋಕ್ ಕುಮಾರ್, ಪೂರ್ವಾಧ್ಯಕ್ಷರಾದ ಸುರೇಶ್, ಕಾರ್ಯದರ್ಶಿ ಹೀರಾಚಂದ್, ರೋಟರಿ ಕ್ಲಬ್ ಮಡಂತ್ಯಾರಿನ ಅಧ್ಯಕ್ಷರಾದ ಕಾಂತಪ್ಪಗೌಡ ಪೂರ್ವಾಧ್ಯಕ್ಷರಾದ ಜಯಂತ ಶೆಟ್ಟಿ, ಕಾರ್ಯದರ್ಶಿ ಮಾಕ್ಸಿಮ್ ಅಲ್ಬುಕರ್ಕ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಆ್ಯಂಟನಿ ಟಿ. ಪಿ., ಉಪನ್ಯಾಸಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Latest 5

Related Posts