ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ 2020-21ನೇ ಸಾಲಿನಲ್ಲಿ ಧನಂಜಯರಾವ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಧರ ಕೆ. ವಿ. ಕಾರ್ಯದರ್ಶಿಯಾಗಿ ಮಾಡಿದ ರಾಷ್ಟ್ರಮಟ್ಟದ ದಾಖಲೆಯ ಕಾರ್ಯಗಳಿಗೆ ರೋಟರಿ ಜಿಲ್ಲೆಯಿಂದ ಹಲವಾರು ಪ್ರಶಸ್ತಿಗಳ ತುರಾಯಿ ದೊರಕಿವೆ.ಬಂಟ್ವಾಳದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ರೋಟರಿ ಸಮಾರಂಭದಲ್ಲಿ ರೋಟರಿ ಜಿಲ್ಲೆ ಕ್ಲಬ್ಗಳಿಗೆ ಕೊಡಲ್ಪಡುವ ಪ್ರಶಸ್ತಿಗಳಲ್ಲಿ ಬೆಳ್ತಂಗಡಿ ಕ್ಲಬ್ ಗೆ ಅತ್ಯುನ್ನತ ಪ್ರಶಸ್ತಿ ‘ಪ್ಲಾಟಿನಂ ಪ್ಲಸ್’ನ ಗೌರವ ಸಿಕ್ಕಿದರೆ; ಭೂಮಿಯ ಅಂತರ್ಜಲವನ್ನು ಮಟ್ಟವನ್ನು ಉಳಿಸುವ ಹಾಗೂ ಏರಿಸುವ ಸಲುವಾಗಿ ಮಾಡಿದ ನೀರುಳಿಸುವ ಬಗ್ಗೆ ಮಾಡಿದ ಕಾರ್ಯಕ್ರಮಗಳಿಗೆ ‘ಇನ್ನೋವೇಟಿವ್ ಪ್ರಾಜೆಕ್ಟ್’ ಪ್ರಶಸ್ತಿ; ಒಂದು ವರ್ಷದಲ್ಲಿ 1000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿ, ಅವುಗಳನ್ನು ರೋಟರಿ ಇಂಡಿಯಾ ವೆಬ್ಸೈಟ್ಗೆ ದಾಖಲೀಕರಣ ಗೊಳಿಸುವಲ್ಲಿ ದೇಶದಲ್ಲೇ ಅಗ್ರ ಪಂಕ್ತಿಯನ್ನು ಪಡೆದ ಬಗ್ಗೆ ವಿಶೇಷ ಪ್ರಶಸ್ತಿ; ಬೆಳ್ತಂಗಡಿ ರೋಟರಿ ಕ್ಲಬ್ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಹಾಗೂ ಕಾರ್ಯದರ್ಶಿ ಶ್ರೀಧರ ಕೆ. ವಿ. ಅವರಿಗೆ ಅವರ ಮಹೋನ್ನತ ಕಾರ್ಯಗಳನ್ನು ಪರಿಗಣಿಸಿ ವಿಶೇಷ ಅಭಿನಂದನಾ ಪತ್ರ, ಮಾತ್ರವಲ್ಲ; ಜಿಲ್ಲಾ ಮಟ್ಟದ ರೋಟರಿ ಸಮುದಾಯ ದಳದ ಸಮ್ಮೇಳನದ ಆತಿಥ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಬಗ್ಗೆ ಅಭಿನಂದನೆ; ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಕ್ರೀಯಾಶೀಲ ನಾಯಕತ್ವ ಕ್ಕಾಗಿ ಸಮ್ಮಾನ… ಹೀಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳಿಂದಲೂ ಬೆಳ್ತಂಗಡಿ ರೋಟರಿ ಕ್ಲಬ್ನ ಕಳೆದ ವರ್ಷದ ಕಾರ್ಯವೈಖರಿ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತವಾಯಿತು.






