ಬೆಳ್ತಂಗಡಿ: ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ವತಿಯಿಂದ ಸೋಣಂದೂರು ಗ್ರಾಮದ ಪೊಮ್ಮಜೆ ಭಾಗದ 150 ಕುಟುಂಬಗಳಿಗೆ ಹೈಕೋರ್ಟ್ ವಕೀಲರು ಹಾಗೂ ಬೆಸ್ಟ್ ಫೌಂಡೇಷನ್‌ನ ರಕ್ಷಿತ ಶಿವರಾಂ ಇವರ ನೇತೃತ್ವದಲ್ಲಿ ಇಂದು ದಿನಸಿ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬೇಬಿ ಸುವರ್ಣ ಎಸ್., ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಬೆಳ್ತಂಗಡಿ ಯುವ ಕಾಂಗ್ರೆಸ್‌ನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅನಿಲ್ ಪೈ, ತಾಲೂಕು ಮಲೆಕುಡಿಯ ಸಂಘದ ಕಾರ್ಯದರ್ಶಿ ಜಯನಂದ ಪಿಲಿಕಲ, ಯುವ ಕಾಂಗ್ರೆಸ್ ಸದಸ್ಯರಾದ ಅಜಯ್ ಮಾಟ್ಲ, ರಮೀಝ್, ಗಣೇಶ್ ಕಣಿಯೂರು, ಪ್ರಜ್ವಲ್ ಜೈನ್, ಅಹಮ್ಮದ್, ದರ್ಣಪ್ಪ ಪೂಜಾರಿ, ಶರೀಪ್ ಮತ್ತಿತರರು ಉಪಸ್ಥಿತರಿದ್ದರು.






