ಕೋವಿಡ್ ವಾರಿಯರ್ಸ್‌ಗಳಿಗೆ ಸಮ್ಮಾನ

ಕೋವಿಡ್ ವಾರಿಯರ್ಸ್‌ಗಳಿಗೆ ಸಮ್ಮಾನ
Facebook
Twitter
LinkedIn
WhatsApp

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ (ರಿ) ರಾಜ್ಯ ಸಮಿತಿಯ ವತಿಯಿಂದ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಇಂಡಿಯೋತ್ಸವ-75’ ಕಾರ್ಯಕ್ರಮದ ಭಾಗವಾಗಿ, ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಸಮಿತಿ ವ್ಯಾಪ್ತಿಯಲ್ಲಿ ಕೊರೊನೋ ಸೋಂಕು ಬಿಗಡಾಯಿಸಿದ ಸಂದರ್ಭ ಕೋವಿಡ್ ವಾರಿಯರ್ಸ್ ಆಗಿ ಸಕ್ರಿಯವಾಗಿ ದುಡಿದ 14 ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ಕಲ್ಲೇರಿ ಎಸ್.ಎಂ.ಎ. ಕಛೇರಿಯಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಹಿರಿಯ ವಿದ್ವಾಂಸರಾದ ಇಬ್ರಾಹಿಂ ಮದನಿ ತುರ್ಕಳಿಕೆ ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ ಕಾರ್ಯಕ್ರಮ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯರಾದ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಸಂದೇಶ ಭಾಷಣ ಮಾಡಿದರು. ಹಿರಿಯ ವಿದ್ವಾಂಸರಾದ ಕಾಸಿಂ ಮದನಿ ಉಸ್ತಾದ್ ಕರಾಯ, ಇಬ್ರಾಹಿಂ ಮದನಿ ತುರ್ಕಳಿಕೆ, ಹಮೀದ್ ಸಅದಿ ಕಳಂಜಿಬೈಲು ಮಾತನಾಡಿ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಝಾಕಿರ್ ಹುಸೈನ್ ಕಣಿಯೂರು ಸ್ವಾಗತ ಭಾಷಣ ಮಾಡಿದರು.ವೇದಿಕೆಯಲ್ಲಿ ಪ್ರಮುಖರಾದ ಅಬ್ಬಾಸ್ ಬಟ್ಲಡ್ಕ, ಎ. ಕೆ. ಅಹ್ಮದ್ ಎರುಕಡಪು, ಇಬ್ರಾಹಿಂ ಎನ್. ಎನ್. ಬಿ‌ ಇಳಂತಿಲ ಮುರ, ಕಾಸಿಂ ನೆಕ್ಕಿಲ್, ರಝಾಕ್ ತೆಕ್ಕಾರು, ಅಬ್ಬಾಸ್ ಪದ್ಮುಂಜ, ಇಬ್ರಾಹಿಂ ಮುಸ್ಲಿಯಾರ್, ಹೈದರ್ ಹಾಜಿ ತುರ್ಕಳಿಕೆ, ಅಬೂಬಕರ್ ಕರಾಯ, ಇಮಾದ್ ಕರಾಯ ಸಹಿತ ಬ್ಲಾಕ್ ನಾಯಕರು, ಗ್ರಾಮ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಜಿ. ಎಂ‌ ಕುಂಞಿ ಜೋಗಿಬೆಟ್ಟು, ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್, ಶರೀಫ್ ಇಳಂತಿಲ ಮುರ, ಉಸ್ಮಾನ್ ಸೋಕಿಲ, ಹಂಝ ಸೋಕಿಲ, ಅಶ್ರಫ್ ಜೋಗಿಬೆಟ್ಟು, ಯೂಸುಫ್ ಹಾಜಿ ಕಳಂಜಿಬೈಲು, ಅಬ್ದುರ್ರಹ್ಮಾನ್ ಬಾಜಾರ, ದಾವೂದ್ ಉರ್ಲಡ್ಕ, ಸಾಬಿತ್ ಜೋಗಿಬೆಟ್ಟು, ಡಾl ಯಾಕೂಬ್ ಮೂರುಗೋಳಿ, ಪದ್ಮುಂಜ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾl ಡಯಾನಾ ಸವಿತಾ, ಮಹಿಳಾ ವಾರಿಯರ್ಸ್ ಗಳಾದ ಫೌಝಿಯಾ ಹಾಗೂ ಆಮಿನಾರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

Latest 5

Related Posts