ಪಂಜಿನ ಮೆರವಣಿಗೆಗೆ ಸಜ್ಜಾದ ಮೂಡುಬಿದಿರೆಯ ಕಾಂಗ್ರೆಸ್

ಪಂಜಿನ ಮೆರವಣಿಗೆಗೆ ಸಜ್ಜಾದ ಮೂಡುಬಿದಿರೆಯ ಕಾಂಗ್ರೆಸ್
Facebook
Twitter
LinkedIn
WhatsApp

ಮೂಡುಬಿದಿರೆ : ರಾಜ್ಯ ಬಿಜೆಪಿ ಸರಕಾರ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸುತಿರುವುದನ್ನು ಖಂಡಿಸಿ, ಮೂಡಬಿದಿರೆಯಲ್ಲಿ ಸೆಪ್ಟೆಂಬರ್ 25ರಂದು ಸಂಜೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜಿನ ಮೆರವಣಿಗೆ ನಡೆಯಲಿದ್ದು, ಮೂಡುಬಿದಿರೆಯ ಕಾಂಗ್ರೆಸ್ ಕಾರ್ಯಕರ್ತರು ಈ ಪಾದಯಾತ್ರೆ ಮತ್ತು ಪಂಜಿನ ಮೆರವಣಿಗೆಗೆ ಸಂಪೂರ್ಣ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 25ರ ಸಂಜೆ ಆಲಂಗಾರು ಬಸ್ ನಿಲ್ದಾಣದಿಂದ ಮೂಡಬಿದ್ರಿಯ ಸರ್ಕಾರಿ ಬಸ್ಸ್ ನಿಲ್ದಾಣದವರೆಗೆ ಹಮ್ಮಿಕೊಳ್ಳಲಾಗಿರುವ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಮಿಥುನ್ ರೈ ಹಾಗೂ ಅಭಯಚಂದ್ರ ಜೈನ್ ಇವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಲಿದ್ದು, ಮೂಡುಬಿದಿರೆ ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಾಂಗ್ರೆಸ್ ಕಾರ್ಯಕರ್ತರು ಈ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ ಪತ್ರಿಕೆಗೆ ತಿಳಿಸಿದ್ದಾರೆ. ಆಲಂಗಾರಿನಿಂದ ಮೂಡುಬಿದಿರೆಯವರೆಗೆ ತಡ ರಾತ್ರಿಯವರೆಗೂ ಕಾಂಗ್ರೆಸ್ ಪಕ್ಷದ ಉತ್ಸಾಹಿ ಯುವ ಕಾರ್ಯಕರ್ತರು ಪಕ್ಷದ ಬಾವುಟವನ್ನು ಕಟ್ಟಿ ಅಲಂಕರಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಚಂದ್ರಹಾಸನಿಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಕ್ಷದ ಬಾವುಟ ಕಟ್ಟುವ ಕಾರ್ಯದಲ್ಲಿ ತೊಡಗಿದ್ದುದು ಕಂಡುಬಂದಿದ್ದು ಪಕ್ಷಕ್ಕೆ ಜೀವಕಳೆ ತುಂಬಿದಂತಾಗಿದೆ. ಇದಕ್ಕೂ ಮೊದಲು ಹಗಲಿಡೀ ಮೂಡುಬಿದಿರೆ ತಾಲುಕಿನ ವಿವಿಧೆಡೆ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿ ಪಂಜಿನ ಮೆರವಣಿಗೆಯ ಯಶಸ್ಸಿಗೆ ವಿನಂತಿಸಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ತಿಳಿಸಿದ್ದಾರೆ.

Latest 5

Related Posts