ಸಮಗ್ರವಾಗಿರುವ ಸಮಾಜವನ್ನು ಒಡೆಯಬಾರದುಮುಂಡಾಜೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಕಾರ್ಯಕ್ರಮದಲ್ಲಿ ಸಾಹಿತಿ ಚೊಕ್ಕಾಡಿ

ಸಮಗ್ರವಾಗಿರುವ ಸಮಾಜವನ್ನು ಒಡೆಯಬಾರದುಮುಂಡಾಜೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಕಾರ್ಯಕ್ರಮದಲ್ಲಿ ಸಾಹಿತಿ ಚೊಕ್ಕಾಡಿ
Facebook
Twitter
LinkedIn
WhatsApp

ಬೆಳ್ತಂಗಡಿ: ಗಾಂಧೀಜಿ ಒಬ್ಬ ಮಹಾಪುರುಷರು. ಗಾಂಧೀಜಿಯವರ ಹತ್ಯೆಯಾದ ನಂತರ ತರಲಾದ ಚಿತಾಭಸ್ಮವನ್ನು ಹಾಕಿ ಅದರ ಮೇಲೆ ಒಂದು ಆಲದ ಸಸಿಯನ್ನು ಮುಂಡಾಜೆಯಲ್ಲಿ ನೆಡಲಾಯಿತು. ಅದೀಗ ಹೆಮ್ಮರವಾಗಿ ಬೆಳೆದು ಆಮ್ಲಜನಕವನ್ನು ಕೊಡುತ್ತಿದೆ. ಈ ವಿಚಾರವನ್ನು ಮುಂದಿನ ತಲೆಮಾರಿಗೆ ದೃಢಪಡಿಸದೆ ಇರಬಾರದು ಎಂದು ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಮನೆಗೆ ಬಂದಿದ್ದ ಗ್ರಾಮ ಪಂಚಾಯತ್‌ನವರಿಗೆ ಇದನ್ನು ತಿಳಿಸಿದ್ದೆ. ನಂತರ, ಮೊದಲ ಹಂತದಲ್ಲಿ ಗಾಂಧಿ ವಿಚಾರ ವೇದಿಕೆಯ ಉಪಾಧ್ಯಕ್ಷರಾದ ನಾಮದೇವ ರಾವ್ ಅವರು, ನಂತರ ಗ್ರಾಮ ಪಂಚಾಯತ್‌ನವರು ಮುತುವರ್ಜಿ ತೆಗೆದುಕೊಂಡು ಆ ಸ್ಥಳವನ್ನು ಚೆನ್ನಾಗಿ ಮಾಡಿದ್ದಾರೆ. ಬೆಳ್ತಂಗಡಿಯಲ್ಲಿರುವ ಗಾಂಧಿ ಸ್ಮರಣೆಯ ಕೇಂದ್ರವಿದು. ಗ್ರಾಮ ಪಂಚಾಯತ್ತೇ ಇದರ ಅಭಿವೃದ್ಧಿಗೆ ಇಳಿದಿರುವುದು ಸಂತೋಷದ ವಿಷಯ’ ಎಂದು ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು. ಹಿಂದಿನವರು ಒಂದು ಹೊತ್ತು ಊಟ ಮಾಡಿದ್ದರಿಂದ ನಾವು ಮೂರು ಹೊತ್ತು ಊಟ ಮಾಡಲು ಸಾಧ್ಯವಾಗಿದೆ. ಗಾಂಧಿ ಕಾಲದ ಮೌಲ್ಯಗಳು ಆ ಬಗೆಯವುಗಳಾಗಿವೆ. ಗಾಂಧೀಜಿಯಲ್ಲಿ ದೈವೀಕ ಶಕ್ತಿ ಇತ್ತು. ವಿಶ್ವಾದಾದ್ಯಂತ ಗಾಂಧೀಜಿಗಿರುವಷ್ಟು ಸ್ಮಾರಕಗಳು ಬೇರೆ ಯಾರಿಗೂ ಇಲ್ಲ ಎಂದು ಅವರು ಹೇಳಿದರು. ಗಾಂಧಿ ವಿಚಾರ ವೇದಿಕೆ ಬೆಳ್ತಂಗಡಿಯವರು ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಶುಭಸಂದರ್ಭದಲ್ಲಿ ನಡೆಸಿದ ಗಾಂಧಿ ಮರಕ್ಕೆ ಪುಷ್ಪಾರ್ಚನೆ ಮತ್ತು ಗಾಂಧಿ ಚಿಂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ವೇದಿಕೆಯ ಮಾತೃ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಮಾತನಾಡಿ, ಸಮಾಜ ಸಮಗ್ರವಾಗಿರುತ್ತದೆ. ಅದನ್ನು ಒಡೆಯಬಾರದು. ಎಲ್ಲರನ್ನೂ ಒಳಗೊಳ್ಳುವ ಗಾಂಧಿ ತತ್ವಗಳನ್ನು ಎಲ್ಲರಿಗೂ ತಲುಪಿಸಬೇಕಾದ ಅಗತ್ಯವಿದೆ ಎಂದರು. ಮುಂಡಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಿಡೆ ರಸ್ತೆ ತಿರುವಿನ ಬಳಿ ಇರುವ ಗಾಂಧಿ ಚಿತಾ ಭಸ್ಮ ಹಾಕಿ ನೆಟ್ಟ ಆಲದ ಮರದ ಬುಡದಲ್ಲಿ ಗಾಂಧಿ ಸ್ಮರಣೆ ಮಾಡಿ, ಸ್ಥಳೀಯ ಶಾಲಾ ವಿದ್ಯಾರ್ಥಿಗಳೊಂದಿಗೆ ಒಟ್ಟಾಗಿ ‘ರಘುಪತಿ ರಾಘವ ರಾಜಾರಾಮ್’ ಹಾಡನ್ನು ಹಾಡಿದ ಬಳಿಕ ಪವಿತ್ರ ಆಲದ ಮರಕ್ಕೆ ಪುಷ್ಪಾರ್ಚನೆಯನ್ನು ಮಾಡಿದ ನಂತರ ಈ ವೃಕ್ಷವನ್ನು ನೆಡಲು ಕಾರಣರಾದ ಹಿರಿಯ ಗಾಂಧಿವಾದಿ ದಿವಂಗತ ಜಿ. ಎನ್. ಭಿಡೆಯವರ ಮನೆಗೆ ಹೋಗಿ ಗಾಂಧಿ ಚಿಂತನವನ್ನು ನಡೆಸಲಾಯಿತು. ಗಾಂಧಿ ವಿಚಾರ ವೇದಿಕೆಯ ಬೆಳ್ತಂಗಡಿ ಘಟಕದ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ಣಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಡುವೆಟ್ಣಾಯ ಅವರು ಮಾತನಾಡಿ, ಗಾಂಧಿ ಚಿಂತನೆ ಮತ್ತು ನಮ್ಮ ಸಂಸ್ಕೃತಿ ಬೇರೆಬೇರೆಯಲ್ಲ. ಅವು ಒಟ್ಟಾಗಿ ಸಮಗ್ರ ರೂಪದಲ್ಲಿ ಸಮಾಜವನ್ನು ತಲುಪಬೇಕು ಎಂದರು.ಪತ್ರಕರ್ತ ಅಶ್ರಫ್ ಆಲಿಕುಂಞಿ ನಿರೂಪಿಸಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಗಾಂಧಿ ವಿಚಾರ ವೇದಿಕೆಯ ತಾಲೂಕು ಮಹಿಳಾ ಘಟಕದ ಪ್ರಮುಖೆ ವಿನುತಾ, ಮಾತೃ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಕಾಂಚೋಡು ಅನಿಸಿಕೆ ವ್ಯಕ್ತ ಪಡಿಸಿದರು. ತಾಲೂಕು ಘಟಕದ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಕಾರ್ಯದರ್ಶಿ ವಿದ್ಯಾ ಕುಮಾರ್ ಉಪಸ್ಥಿತರಿದ್ದರು. ಸುಧಾ ರಮಾನಂದ್ ಕೊನೆಯಲ್ಲಿ ವಂದಿಸಿದರು.

Latest 5

Related Posts